ಕಾಗವಾಡ: ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಅಂಗ ಸಂಸ್ಥೆಗಳಾದ ಮಹಾವೀರ ಮಿರ್ಜಿ ಪಿಯು ವಾಣಿಜ್ಯ ಮಹಾವಿದ್ಯಾಲಯ, ಬಿಬಿಎ ಕಾಲೇಜು, ಜಗದೀಶ್ ಸವದತ್ತಿ ಪಿಯು ಕಾಲೇಜು, ಶೋಭಾ ಜೆ. ಸವದತ್ತಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸಾಂಗಲಿ ನಗರದ ದಕ್ಷಿಣ ಭಾರತ ಜೈನ ಸಭೆಯ ಪದಾಧಿಕಾರಿಗಳು ಶನಿವಾರ ಭೇಟಿ ನೀಡಿದರು.
ನಿವೃತ್ತ ಪ್ರಾಚಾರ್ಯ ಎ.ಬಿ.ಪಾಟೀಲ, ಸಾಂಗಲಿಯ ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ಬಾಲಚಂದ್ರ ಪಾಟೀಲ, ರಾವಸಾಹೇಬ ಪಾಟೀಲ, ಡಾ.ಅಜಿತ ಪಾಟೀಲ, ಟ್ರಸ್ಟಿ ಅನಿಲ ಭಾಗನೆ, ರಾಜಕುಮಾರ ಝೆಲೆ, ಡಾ.ಚಂದ್ರಕಾಂತ ಚೌಗಲೆ, ಅನಿತಾ ಪಾಟೀಲ, ಅಂಜಲಿ ಕೊಲ್ಹೆ, ಪ್ರಾಂಶುಪಾಲ ರವಿ ದಂಡಗಿ, ಶ್ವೇತಾ ಪ್ಯಾಟ್ರೋಟಿ, ಉಪ ಪ್ರಾಂಶುಪಾಲ ಡಾ.ಭರತ ಅಲಸಂದಿ, ರಘು ಉಪ್ಪಾರ, ಸಂಗೀತಾ ಮೋತಿಮಠ ಇತರರಿದ್ದರು.