ಬಾಗಲಕೋಟೆ: ಜಿಲ್ಲೆಯ ಬೀಳಗಿಯ ಸುಪ್ರಸಿದ್ದ ಶಹನಾಯಿ ವಾದಕ ಸನಾದಿ ಅಪ್ಪಣ್ಣನವರ ಸಮಾಧಿ ಶಿಥೀಲಗೊಂಡಿದ್ದು, ಅದರ ಅಭಿವೃದ್ದಿಗೆ ಕ್ರಮವಹಿಸಲಾಗುತ್ತಿದೆ ಎಂದು ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಜರುಗಿದ ಅಲೆಮಾರಿ ಅಭಿವೃದ್ದಿ ನಿಗಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಿಗಮದ ಅಧ್ಯಕ್ಷರಾಗಿ ಪ್ರಥಮಬಾರಿಗೆ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಸನಾದಿ ಅಪ್ಪಣ್ಣನವರ ಜನ್ಮಸ್ಥಳವಾದ ಬೀಳಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಸಮಾಧಿ ಶೋಚನೀಯ ಸ್ಥತಿಯಲ್ಲಿ ಇತ್ತು. ಸಮಾದಿ ಅಭಿವೃದ್ದಿಗೆ ಸರಕಾರದ ಮುಂದೆ ಪ್ರಸ್ತಾವನೆ ಇದೆ. ಈ ಬಗ್ಗೆ ವಿಶೇಷ ಗಮನ ಹರಿಸಿದ ಜಿಲ್ಲಾಧಿಕಾರಿಗಳು ಭೂಮಿಯ ವ್ಯವಸ್ಥೆಗೆ ಸಮ್ಮತಿ ನೀಡಿದ್ದಾರೆ. ಅಲ್ಲದೇ ಸನಾದಿ ಅಪ್ಪಣ್ಣನವರ ಸಂಗೀತ ಅಕಾಡೆಮಿ ಹಾಗೂ ಪ್ರಶಸ್ತಿ ಸ್ಥಾಪನೆ ಮಾಡಲಿಕ್ಕೂ ಸಹ ಪ್ರಸ್ತಾವನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಇರುವುದಾಗಿ ತಿಳಿಸಿದರು.
ಅಲೆಮಾರಿ ಅಭಿವೃದ್ದಿ ನಿಗದಮ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಆಗದಂತೆ ಎಲ್ಲ ಫಲಾನುಭವಿಗಳಿಗೆ ಸರಕಾರದಿಂದ ಕೊಡಲ್ಪಟ್ಟ ಅನುಧಾನ ತ್ವರಿತಗತಿಯಲ್ಲಿ ತಲುಪಿಸುವ ಕೆಲಸವಾಗಬೇಕು. ಅಲೇಮಾರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ಬರುತ್ತಿದ್ದು, ಅನುಷ್ಠಾನ ಸಮಿತಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಅವಕಾಶ ನೀಡಲು ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆಯ ಪ್ರವಾಸದಲ್ಲಿ ಬಾದಾಮಿ ತಾಲೂಕಿನ ಕಾಟಾಪೂರದಲ್ಲಿ ಗ್ರಾಮವಾಸ್ತವ್ಯ ಮಾಡಿದ್ದು, ಅಲ್ಲಿ ೭೦ ಕುಟುಂಬಗಳು ಶಿಳ್ಳೇಕ್ಯಾತ ಸಮುದಾಯ ಇದ್ದು, ಈ ಸಮುದಾಯದಲ್ಲಿ ಒಬ್ಬ ವ್ಯಕ್ತಿಯುವ ಪದವಿ ಪಡೆದಿರುವುದು ನೋವಿನ ಸಂಗತಿಯಾಗಿದೆ. ಸರಕಾರದ ಸೌಲಭ್ಯಗಳ ಈ ಜನಾಂಗಕ್ಕೆ ಮುಟ್ಟಿಸುವ ಕಾರ್ಯವಾಗಬೇಕು ಎಂದರು.
ಕಳೆದ ೪೫-೫೦ ವರ್ಷದಿಂದ ಶಿಳ್ಳೇಖ್ಯಾತ ಮತ್ತು ಸಿಳ್ಳೇಖ್ಯಾತ ಕುರಿತು ಜಾತಿ ಪ್ರಮಾಣ ನೀಡುವಲ್ಲಿ ತೊಂದರೆಯಾಗಿದೆ. ಬಾದಾಮಿ ಮತ್ತು ಹುನಗುಂದ ತಾಲೂಕಿನಲ್ಲಿ ಕಂಡುಬAದಿದೆ. ತಂದೆಗೆ ಜಾತಿ ಪ್ರಮಾಣ ಕೊಟ್ಟರೆ, ಮಗನಿಗೆ ಕೊಟ್ಟಿಲ್ಲ ಇದರಿಂದ ಸರಕಾರದ ಸೌಲಭ್ಯದಿಂದ ವಂಚಿತರಾಗುತ್ತಿರುವ ಬಗ್ಗೆ ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದಾಗ ಕೂಡಲೇ ಬಾಗಲಕೋಟೆ ಉಪವಿಭಾಗಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಕರೆ ಮಾಡಿ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ತೊಂದರೆಯನ್ನು ಸರಿಪಡಿಸುವಂತೆ ಸೂಚನೆ ನೀಡಿದರು.
ಎಸ್‌ಸಿ, ಎಸ್‌ಟಿ ಪ್ರತಿಭಾನ್ವಿತ ಬಾಲಕಿಯರ ವಸತಿ ಪ್ರೌಢ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶೌಚಾಲಯ ವ್ಯವಸ್ಥೆ ಸರಿಯಾಗಿ ಇರಲಿಲ್ಲ. ದುರಸ್ಥಿಗೆ ಕ್ರಮವಹಿಸಲು ತಿಳಿಸಿದಾಗ ಈಗಾಗಲೇ ಹೊಸ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದ್ದು, ಸರಿಪಡಿಸುವುದಾಗಿ ವಸತಿ ಶಾಲೆಯ ಪ್ರಾಚಾರ್ಯರು ಸಭೆಗೆ ತಿಳಿಸಿದರು. ಅಲ್ಲದೇ ಪ್ರತಿಭಾನ್ವಿತ ವಸತಿ ಪ್ರೌಢಶಾಲೆಗೆ ಪ್ರವೇಶ ಪರೀಕ್ಷೆ ಇಲ್ಲದೇ ಶೇ.೧೦ ಸೀಟುಗಳನ್ನು ಅಲೆಮಾರಿ ಜನಾಂಗಕ್ಕೆ ಮೀಸಲಿಡಲು ಸರಕಾರದಿಂದ ಆದೇಶ ಇದ್ದು, ಸಮುದಾಯದ ಮುಖಂಡರನ್ನೊಳಗೊAಡ ವಾಟ್ಸಪ್ ಗ್ರೂಪ್ ಮೂಲಕ ಮಾಹಿತಿ ರವಾನಿಸಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ, ಅನುಷ್ಠಾನ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಹನಮಂತ ಭಜಂತ್ರಿ, ಮಂಗಳಪ್ಪ ಕೊರವ, ಚಂದ್ರಕಾAತ ಚಿಮ್ಮಡಿ ಸೇರಿದಂತೆ ಆಯಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ಅಂಬೇಡ್ಕರ ಅಭಿವೃದ್ದಿ ನಿಗಮದ ತಾಲೂಕಾ ಅಧಿಕಾರಿಗಳು ಉಪಸ್ಥಿತರಿದ್ದರು.