ಜಿಲ್ಲೆ

ಸನಾತನ ಧರ್ಮದಲ್ಲಿದೆ ಮಾನವೀಯತೆ

ಅಥಣಿ ಗ್ರಾಮೀಣ: ಪ್ರಾರ್ಥನೆ, ಹೋಮ, ಭಜನೆಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ಶುದ್ಧಗೊಂಡು ಆನಂದಗೊಳ್ಳುತ್ತದೆ ಎಂದು ಕಾಗವಾಡ ಗುರುದೇವ ಆಶ್ರಮದ ಯತೀಶ್ವರಾನಂದ ಸ್ವಾಮೀಜಿ ಹೇಳಿದರು.

ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ಹನುಮಾನ ದೇವಸ್ಥಾನದ ಆವರಣದಲ್ಲಿ ಹನುಮ ಮಾಲಾಧಾರಿಗಳಿಂದ ಪವಮಾನ ಹೋಮ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಪಲ್ಲಕ್ಕಿ ಉತ್ಸವ ಹಾಗೂ ಪುರವಂತರ ನೃತ್ಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಸನಾತನ ಧರ್ಮದಲ್ಲಿ ಮಾನವೀಯತೆ ಅಡಕವಾಗಿದೆ. ಹಾಗಾಗಿ ಯುವಕರು ಸಂಪ್ರದಾಯ ಅಳವಡಿಸಿಕೊಂಡು ಸಂಸ್ಕಾರವಂತರಾಗಬೇಕೆಂದು ನುಡಿದರು.

ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ಚಾತುರ್ಮಾಸದಲ್ಲಿ ಹನುಮಮಾಲೆ ಧರಿಸಿದರೆ ಇಷ್ಟಾರ್ಥ ಸಿದ್ಧಿಸುತ್ತವೆ ಎಂಬ ನಂಬಿಕೆ ಆಂಜನೇಯ ಭಕ್ತರಲ್ಲಿದೆ. ಅಂಜನಾದ್ರಿಗೆ ತೆರಳುವ ಹನುಮ ಮಾಲಾಧಾರಿಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರ ಕುಂಭಮೇಳ ಹಾಗೂ ಹನುಮ ಮಾಲಾಧಾರಿಗಳಿಂದ ಹನುಮಂತ ದೇವರ ಪಲ್ಲಕ್ಕಿ ಮೆರವಣಿಗೆ ಜರುಗಿತು.

ಆನಂದ ಧೂಳಶೆಟ್ಟಿ, ಮುತ್ತಪ್ಪ ಶಿವಪುರ, ರಾಜು ಕೆಂಚಣ್ಣವರ, ಶಂಕರ ನಾಯಿಕ, ಪ್ರಶಾಂತ ಮಾಳಿ, ಮುರಗೇಶ ಹಿರೇಮಠ, ಮಹೇಶ ಹಾದಿಮನಿ, ತಿಮ್ಮಯ್ಯ ಪೂಜಾರಿ, ಸುಖದೇವ ಕೋಳಿ, ಬಸು ಉಕ್ಕಲಿ, ಮಂಜು ಪೂಜಾರಿ, ಸುರೇಶ ಸಂಕೋನಟ್ಟಿ ಸೇರಿ ಕೋಹಳ್ಳಿ, ವಿಜಯಪುರ, ಬೇಡರಟ್ಟಿ, ಅಡಹಳ್ಳಟ್ಟಿ ಗ್ರಾಮದ ಮಾಲಾಧಾರಿಗಳು ಮತ್ತು ಪುರವಂತರು ಪಾಲ್ಗೊಂಡಿದ್ದರು.