ಜಿಲ್ಲೆ

ಸದ್ಗುರುವಿನ ದರ್ಶನದಿಂದ ಮುಕ್ತಿ ಸಾಧ್ಯ

ಕೆಂಭಾವಿ: ಸದ್ಗುರುವಿನ ದರ್ಶನ, ಸ್ಪರ್ಶ ಮತ್ತು ಅವರ ವಾಣಿಯಿಂದ ನಮ್ಮ ಜನ್ಮ ಮುಕ್ತಿ ಹೊಂದಲು ಸಾಧ್ಯ ಎಂದು ಮುರಾರ್ಜಿ ದೇಸಾಯಿ ವಸತಿ ಶಾಲೆ ಸಂಗೀತ ಶಿಕ್ಷಕ ರಮೇಶ ಶಾಸ್ತಿç ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಗುರುಕಾಂತೇಶ್ವರ ಸೇವಾ ಪ್ರತಿಷ್ಠಾನದಿಂದ ಬುಧವಾರ ಹಮ್ಮಿಕೊಂಡ ಮಾಸಿಕ ಶಿವಾನುಭವ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಮಲಮೂತ್ರದ ಈ ಕಾಯ ಮಣ್ಣಾಗುವ ಮೊದಲು ಮಹಾದೇವನ ನೆನೆಯಲು ಭಕ್ತರು ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು ಎಂದರು.

ಕಾಯ ಶುದ್ಧಿಗೆ ಕಾಂತೇಶ್ವರನ ನಿತ್ಯ ಭಜಿಸಿ ಮುಕ್ತಿ ಪಡೆಯೋಣ, ಮುಂಬರುವ ದಿನಗಳಲ್ಲಿ ಈ ಶಿವಾನುಭವ ಗೋಷ್ಠಿ ದಶಮಾನೋತ್ಸವ ಆಚರಿಸುತ್ತಿರುವುದು ಅತೀವ ಸಂತಸ ತಂದಿದೆ. ಈ ಮಹತ್ಕಾರ್ಯಕ್ಕೆ ಪೀಠಾಧಿಪತಿ ಶ್ರೀ ಚನ್ನಬಸವ ಶಿವಾಚಾರ್ಯರ ನಿರಂತರ ಸತ್ಕಾರ್ಯವೇ ಮೂಲ ಕಾರಣ ಎಂದು ಹೇಳಿದರು.

ನಿವೃತ್ತ ಶಿಕ್ಷಕ ಜಿ.ಎನ್.ರೋಡಲಬಂಡಿ ಮಾತನಾಡಿದರು. ಮನೋಜ ಪತ್ತಾರ, ಯಮುನೇಶ ಯಾಳಗಿ, ಸೋಮನಾಥ ಯಾಳಗಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಪೀಠಾಧಿಪತಿ ಶ್ರೀ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ನಿಂಗನಗೌಡ ದೇಸಾಯಿ, ಶರಣಪ್ಪ ನಡಕೂರ, ವೀರಣ್ಣ ಕಲಕೇರಿ, ಸಿದ್ದು ತಳ್ಳಳ್ಳಿ, ಅಭಿಷೇಕ ಪಾಟೀಲ್, ನಿಜಗುಣಿ ವಿಶ್ವಕರ್ಮ, ಅವ್ವಣ್ಣ ಮಡಿವಾಳರ ಇದ್ದರು. ಡಾ.ಯಂಕನಗೌಡ ಪಾಟೀಲ್ ನಿರೂಪಿಸಿದರು.