ಜಿಲ್ಲೆ

ಸದೃಢ ಯುವಕರು ದೇಶದ ಸಂಪತ್ತು

ಸಂತೋಷ ದೇಶಪಾಂಡೆ

ಬಾಗಲಕೋಟೆ: ದೇಶವನ್ನು ಕಟ್ಟುವಲ್ಲಿ ಸದೃಢ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅದಕ್ಕೆ ವಿದ್ಯಾರ್ಥಿಗಳು ದೇಶವನ್ನು ರೂಪಿಸುವ ರೂವಾರಿಗಳಾಗಿದ್ದಾರೆ. ಅವರಿಗೆ ಸೂಕ್ತವಾದ ತರಬೇತಿ ನೀಡಿ ಅವರನ್ನು ದೇಶದ ಮುಖ್ಯವಾಹಿನಿಗೆ ತರುವ ಕಾರ್ಯವನ್ನು ಶಿಬಿರಗಳು ಮಾಡುವ ಮೂಲಕ ಸದೃಢ ಯುವಕರ ದೇಶದ ಸಂಪತ್ತಾಗುವಂತೆ ಶಾಲಾ ಕಾಲೇಜುಗಳು ಶ್ರಮವಹಿಸಬೇಕು ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಉಪಾಧ್ಯಕ್ಷ ಜಿ.ಎನ್.ಪಾಟೀಲ ಹೇಳಿದರು.

ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ ಸ್ಕೌಟ್ಸ ಮತ್ತು ಗೈಡ್ಸ್ ಬುದ್ಧ ರೋವರ್ಸ ಮತ್ತು ಸೇವಾಭಾರತಿ ರೇಂಜರ್ಸ ಘಟಕಗಳು, ರೇಡ್‌ಕ್ರಾಸ್, ಎನ್.ಸಿ.ಸಿ, ಎನ್.ಎಸ್.ಎಸ್ ಮತ್ತು ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಸಸಿ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ದೇಶ ಕಟ್ಟುವ ಮನೋಭಾವವನ್ನು ಬೆಳೆಸುತ್ತವೆ ಇದರಿಂದ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಕವಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯೋಗ ಮತ್ತು ಯೋಗ್ಯತೆಯನ್ನು ಗಳಿಸಿಕೊಂಡು ಆಪೇಕ್ಷಿತ ಕಾರ್ಯಗಳನ್ನು ಮಾಡಿದಾಗ ಅದರ ಫಲ ಯೋಗ್ಯವಾಗಿರುತ್ತದೆ. ಅಂತಹ ಯೋಗ ಮತ್ತು ಯೋಗ್ಯತೆಯನ್ನು ಗಳಿಸಲು ಶಿಬಿರಗಳು ಸಹಕಾರಿಯಾಗುತ್ತವೆ. ಅದಕ್ಕಾಗಿ ಇಂತಹ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡು, ಶಿಬಿರದ ಸದಪಯೋಗ ಪಡೆಯುವಂತೆ ಕರೆ ನೀಡಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಎಸ್.ಎಸ್.ದಳವಾಯಿ ಮಾತನಾಡಿ, ಶಿಬಿರದ ಉದ್ದೇಶ ಮತ್ತು ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಸಾಂಸ್ಕೃತಿಕ ವಿಭಾಗ ಸಂಚಾಲಕ ಡಾ.ಜಿ.ಜಿ ಹಿರೇಮಠ ಮಾತನಾಡಿ, ರೆಡ್‌ಕ್ರಾಸ್, ಎನ್.ಸಿ.ಸಿ, ಎನ್.ಎಸ್.ಎಸ್. ರೇಂಜರ್ಸ, ರೋರ‍್ಸ ಘಟಕಗಳ ಸಂಚಾಲಕರಾದ ನೀಲಪ್ಪ ಕುರಿ, ಡಾ.ಭಾಸ್ಕರ ಮುಂಡೆವಾಡಿ, ಶಶಿಧರ ಕುಂಬಾರ, ಡಾ.ಸುಮಂಗಲಾ ಮೇಟಿ, ಪರಸಪ್ಪ ತಳವಾರ ಉಪಸ್ಥಿತರಿದ್ದರು.ರಕ್ತದಾನ ಶಿಬಿರದಲ್ಲಿ ಒಟ್ಟು ೨೨ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಜ್ಯೋತಿ ಕೊಟಿಕಲ್ಲ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಡಾ.ಸುಮಂಗಲಾ ಮೇಟಿ ಸ್ವಾಗತಿಸಿದರು, ಪರಸಪ್ಪ ತಳವಾರ ವಂದಿಸಿದರು, ಡಾ.ಚಂದ್ರಶೇಕರ ಕಾಳನ್ನವರ ನಿರೂಪಿಸಿದರು.