ಜಿಲ್ಲೆ

ಸದೃಢ ದೇಹದಲ್ಲಿ ಆರೋಗ್ಯಕರ ಮನಸ್ಸು

ಮಲ್ಲಮ್ಮನ ಬೆಳವಡಿ: ಸ್ಥಳೀಯ ವೀರ ರಾಣಿ ಮಲ್ಲಮ್ಮ ಸ್ಮಾರಕ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಗುರುವಾರ ಚಾಲನೆ ನೀಡಲಾಯಿತು. ಅಧ್ಯಕ್ಷತೆ ವಹಿಸಿ ಸಂಸ್ಥೆ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಪಾಠದೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಶಾರೀರಿಕವಾಗಿ ಸದೃಢ ಹೊಂದುತ್ತಾರೆ. ಸದೃಢ ದೇಹದಲ್ಲಿ ಆರೋಗ್ಯಕರ ಮನಸ್ಸು ಇರುತ್ತದೆ ಎಂದರು. ಕ್ರೀಡಾಕೂಟವನ್ನು ಪಿಎಸ್‌ಐ ಪ್ರವೀಣ ಗಂಗೋಳ ಉದ್ಘಾಟಿಸಿದರು.

ಗ್ರಾಪಂ ಅಧ್ಯಕ್ಷ ಸಿ.ಬಿ. ಕಾರಿಮನಿ, ಜಿಪಂ ಮಾಜಿ ಸದಸ್ಯ ವಿ.ಎಂ.ಕರಿಕಟ್ಟಿ, ಸಂಸ್ಥೆಯ ನಿರ್ದೇಶಕರಾದ ಬ.ರು.ಭೋಜಯ್ಯನವರ, ಎನ್.ಎಂ.ಕರಿಕಟ್ಟಿ, ಕಾರ್ಯದರ್ಶಿ ಎಂ.ಎಂ.ಕಾಡೆನವರ, ಕಾಲೇಜಿನ ಪ್ರಾಚಾರ್ಯ ಎಂ.ಪಿ.ಉಪ್ಪಿನ, ಮುಖ್ಯಶಿಕ್ಷಕ ಎ.ಎಂ.ಕರಿಕಟ್ಟಿ. ಪ್ರಿನ್ಸಿಪಾಲ್ ಪ್ರವೀಣ ಹಿರೇಮಠ, ನಿವೃತ ಪ್ರಾಚಾರ್ಯ ಎನ್.ಸಿ.ಯರಗಂಬಳಿಮಠ ಉಪಸ್ಥಿತರಿದ್ದರು. ಎಸ್.ಎಂ.ಕರಿಕಟ್ಟಿ ಸ್ವಾಗತಿಸಿದರು. ವಿ.ಎಂ.ಕಾಡೆನವರ ನಿರೂಪಣೆ ಮಾಡಿದರು. ಬಿ.ಎಂ.ಬಂಡ್ರೋಳ್ಳಿ ವಂದಿಸಿದರು.