ಜಿಲ್ಲೆ

ಸದೃಢ ಕಾಯ,ಉತ್ತಮ ಆರೋಗ್ಯಕ್ಕೆ ಯೋಗಾಭ್ಯಾಸ ಅಗತ್ಯ

ಚಿತ್ರದುರ್ಗ: ಮನುಷ್ಯ ಶಾಂತಿ,ನೆಮ್ಮದಿ,ಸೌಹಾರ್ದ ಹಾಗೂ ಸಂತೋಷದಿಂದ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಆತನಿಗೆ ಸದೃಢ ಕಾಯದ ಉತ್ತಮ ಆರೋಗ್ಯದ ಅಗತ್ಯವಿದ್ದು,ಇದನ್ನು ಗಳಿಸಲು ನಿತ್ಯ ಯೋಗಾಭ್ಯಾಸದ ಅಗತ್ಯವಿದೆ ಎಂದು ಭೋವಿಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಶ್ರೀಮಠದ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಯೋಗಾಭ್ಯಾಸ ಕಾರ‌್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು,ಯೋಗದಿಂದ ಋಣಾತ್ಮಕ ಚಿಂತನೆ ದೂರವಾಗಿಸಿ,ಏಕಾಗ್ರತೆ,ಮನೋಬಲ,ಆತ್ಮ ಬಲ,ರೋಗ ನಿರೋಧಕತೆ ಹೆ ಚ್ಚಿ ಸುತ್ತದೆ ಎಂದರು. ಮುಖ್ಯಶಿಕ್ಷಕ ಶ್ರೀಧರ ಮತ್ತಿತರರು ಇದ್ದರು. ಶಿಕ್ಷಕ ವಿರೂಪಾಕ್ಷಪ್ಪ ನೇತೃತ್ವದಲ್ಲಿ ವಿದ್ಯಾರ್ಥಿಗಳು ಯೋಗಭ್ಯಾಸ ಮಾಡಿದರು.

ಯೋಗದಿಂದ ನೆನಪಿನ ಶಕ್ತಿ ಹೆಚ್ಚುತ್ತದೆ
ನಗರದ ಎಸ್‌ಜೆಎಂ ಕಲಾ,ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಅಂತಾರಾಷ್ಟ್ರೀಯ ದಿನವನ್ನು ಆಚರಿಸಲಾಯಿತು. ಮು ಖ್ಯಅತಿಥಿ,ಯೋಗ ಗುರು ಶ್ರೀ ಚಿನ್ಮಯಾನಂದ ಅವರು ಮಾತನಾಡಿ,ಯೋಗ ಕಲಿತರೆ ಪ್ರತಿಯೊಬ್ಬ ವ್ಯಕ್ತಿಯು ನಿರೋಗಿಯಾಗಿರುತ್ತಾನೆ. ದೇಹ ಮತ್ತು ಮನಸ್ಸಿನ ಆರೋಗ್ಯ ಯೋಗ ಸಹಕಾರಿ. ಯೋಗಾಸನ ಸದೃಢ ಕಾಯಕ್ಕೆ,ಪ್ರಾಣಾಯಾಮ ಮನಸ್ಸಿನ ಆರೋಗ್ಯಕ್ಕೆ,ಧ್ಯಾನ ಮೆದುಳಿನ ಚುರುಕಿಗೆ ಸಹಕರಿಸುತ್ತದೆ. ಯೋಗದಿಂದ ನೆನಪಿನ ಶಕ್ತಿ ಜಾಸ್ತಿಯಾಗುತ್ತದೆ ಎಂದರು. ಮುಖ್ಯಗ್ರಂಥಾಲಯಾಧಿಕಾರಿ ಎನ್. ಚಲುವರಾಜು,ಪ್ರಾಂಶುಪಾಲ ಡಾ.ಎಲ್.ಈಶ್ವರಪ್ಪ ಅವರು ಮಾತನಾಡಿದರು. ಎಲ್.ರಾಜಾನಾಯ್ಕ ನಿರೂಪಿಸಿದರು. ಪ್ರಶಾಂತ್ ವಂದಿಸಿದರು.
ಮಹಾವಿದ್ಯಾಲಯದಲ್ಲಿ ಯೋಗ
ನಗರದ ಎಸ್‌ಜೆಎಂ ಕಲಾ,ವಿಜ್ಞಾನ ಮತ್ತು ವಾಣಿಜ್ಯಮಹಾವಿದ್ಯಾಲಯದಲ್ಲಿ ಬುಧವಾರ ವಿಶ್ವಯೋಗ ದಿನವನ್ನು ಆಚ ರಿಸಲಾಯಿತು. ಮುಖ್ಯಅತಿಥಿ ಯೋಗ ಗುರು ರುದ್ರಸ್ವಾಮಿ ಅವರು ಮಾತನಾಡಿದರು. ಪ್ರಾಂಶುಪಾಲ ಡಾ.ಕೆ.ಸಿ.ರಮೇಶ್,ಡಾ.ಹರ್ಷ ವರ್ಧನ್,ಎನ್‌ಸಿಸಿ ಅಧಿಕಾರಿ ಡಾ.ಸತೀಶ್‌ನಾಯ್ಕ,ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ.ಬಿ.ರೇವಣ್ಣ,ಪ್ರೊ.ನಾಗರಾಜ್,ಹಿರಿಯ ಪ್ರಾಧ್ಯಾ ಪಕರಾದ ಪ್ರೊ.ಜಿ.ಎನ್.ಬಸವರಾಜಪ್ಪ,ಪ್ರೊ.ಎಲ್.ಶ್ರೀನಿವಾಸ್,ಪ್ರೊ.ಆರ್.ಕೆ.ಕೇದಾರನಾಥ್,ಪ್ರೊ.ಚಂದಮ್ಮ,ಪ್ರೊ.ಮಂಜುನಾಥ ಸ್ವಾಮಿ,ಪ್ರೊ.ಬಿ.ಎಂ.ಸ್ವಾಮಿ ಮತ್ತಿತರರು ಇದ್ದರು. ಉಪಪ್ರಾಚಾರ್ಯ ಎಚ್.ಕೆ.ಶಿವಪ್ಪ ವಂದಿಸಿದರು.

ಯೋಗ ರತ್ನ ಪ್ರಶಸ್ತಿ ಪ್ರದಾನ
ನಗರದ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ಬುಧವಾರ ವಿಶ್ವ ಯೋಗ ದಿನಾಚರಣೆ ಹಾಗೂ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಯೋಗ ಕ್ಷೇತ್ರ ಸಾಧಕರನ್ನು ಗೌರವಿಸಲಾಯಿತು. ನಗರದ ವೆಂಕಟರಮಣ ದೇವಾಲಯ ಆವರಣ ದಲ್ಲಿ ಏರ್ಪಡಿಸಿದ್ದ ಕಾರ‌್ಯಕ್ರಮದಲ್ಲಿ ಜಿಲ್ಲಾ ಯೋಗ ಸಂಸ್ಥೆ ಅಧ್ಯಕ್ಷ ಎಸ್.ಜಿ.ರಂಗನಾಥ್,ಪತಂಜಲಿ ಯೋಗ ಸಂಸ್ಥೆ ಶಿಕ್ಷಕಿ ಲಲಿತಾಬೇದ್ರೆ, ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿ ಯೋಗ ಧ್ಯಾನ ಟ್ರಸ್ಟ್ ಅಧ್ಯಕ್ಷ ಎ.ಎಸ್.ರಂಗಪ್ಪ,ಚಿನ್ಮಯಿ ಮಯೂರ ಯೋಗ ಸಂಸ್ಥೆ ಅಧ್ಯಕ್ಷ ಎಂ.ಬಿ.ಮುರುಳಿ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಶಿಕ್ಷಕಿ ಕೆ.ಜಿ.ಗೀತಾ ಅವರಿಗೆ ‘ಯೋಗ ರತ್ನ’ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಎ.ಎಸ್.ರಂಗಪ್ಪ ಕಾರ‌್ಯಕ್ರಮ ಉದ್ಘಾಟಿಸಿದರು. ಯೋಗ ಶಿಕ್ಷಕ ರವಿ ಕೆ.ಅಂಬೇಕರ್,ನವೀನ್,ಸುರೇಶ್,ಆರ್.ಸತ್ಯಣ್ಣ,ಮಲ್ಲಿಕಾರ್ಜು ನಾಚಾರ್,ಮಂಜುಳಾ ರಾಜೇಶ್,ವಸಂತಲಕ್ಷ್ಮೀ ಮತ್ತಿತರರು ಇದ್ದರು.ಶಿಕ್ಷಕಿ ನಾಗಲತಾ ನಿರೂಪಿಸಿದರು. ಅಂಬುಜಾಕ್ಷಿ ಹಾಗೂ ತಂಡದ ವರು ದೇವರ ನಾಮಗಳನ್ನು ಪ್ರಸ್ತುತ ಪಡಿಸಿದರು.