ಸುರಪುರ: ಸದೃಢ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಲಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಗಳು ಮಾನಸಿಕ ಮತ್ತು ದೈಹಿಕವಾಗಿ ಹೊಸ ಚೈತನ್ಯ ತುಂಬುವುದರ ಜತೆಗೆ ಪರಸ್ಪರ ಸ್ನೇಹ, ಬಾಂಧವ್ಯ, ಪ್ರೀತಿ ಮತ್ತು ಸಾಮರಸ್ಯ ಬೆಳೆಯುತ್ತದೆ ಎಂದರು.
ಕಾAಗ್ರೆಸ್ ಯುವ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಪ್ರಾಚಾರ್ಯ ಸೋಪಿಸಾಬ್ ಗುತ್ತೇದಾರ್ ಅಧ್ಯಕ್ಷತೆ ವಹಿಸಿದ್ದರು. ವೆಂಕೋಬ ಯಾದವ, ಗುಂಡಪ್ಪ ಸೊಲ್ಲಾಪುರ, ದೊಡ್ಡ ದೇಸಾಯಿ ದೇವರಗೋನಾಲ, ಬಿಇಒ ಯಲ್ಲಪ್ಪ ಕಾಡ್ಲೂರ, ಸಂಜೀವ ದರಬಾರಿ, ಪ್ರಾಚಾರ್ಯರಾದ ಆನಂದಕುಮಾರ ಜೋಶಿ, ಬಸವರಾಜ ಇನಾಂದಾರ, ಪ್ರಮುಖರಾದ ಭೀಮಪ್ಪ ಬೋಸಗಿ, ಕೆ.ಎಲ್.ಚವ್ಹಾಣ್, ಪ್ರಶಾಂತ ಪಾಟೀಲ್, ಶರಣು ನಾಯಕ ಇತರರಿದ್ದರು. ಕುಮಾರಗೌಡ ಸ್ವಾಗತಿಸಿದರು. ರಾಜಪ್ಪ ವಂದಿಸಿದರು. ಉಪನ್ಯಾಸಕ ಮಲ್ಲಪ್ಪ ಮುಷ್ಠಳ್ಳಿ ನಿರೂಪಿಸಿದರು.