ಚಿಕ್ಕಮಗಳೂರಿನ ನಗರಸಭೆ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ದಂತ ತಪಾಸಣಾ ಶಿಬಿರ ನಡೆಸಲಾಯಿತು. ಸುಜಾತಾ ಶಿವಕುಮಾರ್, ಬಿ.ಸಿ.ಬಸವರಾಜ್, ಅನುಮಧುಕರ್, ಡಾ.ಪ್ರೇಮ್‌ಕುಮಾರ್ ಮತ್ತಿತರರಿದ್ದರು. 
ಜಿಲ್ಲೆ

ಸದೃಢ ಆರೋಗ್ಯಕ್ಕಾಗಿ ಮಾದಕ ವಸ್ತುಗಳ ಸೇವನೆ ನಿಷೇಧಿಸಿ

ಚಿಕ್ಕಮಗಳೂರು: ಪೌರ ಕಾರ್ಮಿಕರು ಮಾದಕ ವಸ್ತುಗಳ ಸೇವನೆಯಿಂದ ದೂರ ಇರುವುದರ ಜೊತೆಗೆ ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಸದೃಢ ಹಲ್ಲುಗಳ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ನಗರಸಭಾಧ್ಯಕ್ಷೆ ಸುಜಾತಾ ಶಿವಕುಮಾರ್ ತಿಳಿಸಿದರು.

ನಗರದ ನಗರಸಭೆ ಆವರಣದಲ್ಲಿ ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರಾಷ್ಟಿçÃಯ ಬಾಯಿ ಆರೋಗ್ಯ ಕಾರ್ಯಕ್ರಮ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆ, ನಗರಸಭೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪೌರ ಕಾರ್ಮಿಕರಿಗೆ ಉಚಿತ ದಂತ ಚಿಕಿತ್ಸಾ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಹಲ್ಲುಗಳ ಸ್ವಚ್ಚತೆ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಈ ಶಿಬಿರದಲ್ಲಿ ವೈದ್ಯರು ನೀಡುವ ಸಲಹೆಯನ್ನು ಎಲ್ಲ ಪೌರ ಕಾರ್ಮಿಕರು ಪಾಲಿಸಬೇಕು. ಪ್ರಕೃತಿಯಲ್ಲಿ ದೊರೆಯುವ ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ಪೂರ್ವಜರು ಹಲ್ಲುಗಳು ಸೇರಿದಂತೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಇಂದು ಆಧುನಿಕತೆಯ ಭರಾಟೆಯಲ್ಲಿ ಕೆಮಿಕಲ್ ಬಳಸಿ ತಯಾರಾಗುವ ಟೂತ್‌ಪೇಸ್ಟ್ಗಳಿಂದ ಆರೋಗ್ಯ ಕುಂಠಿತವಾಗುತ್ತಿದೆ ಎಂದು ವಿಷಾಧಿಸಿದರು.

ವೈದ್ಯರು ನೀಡುವ ಸಲಹೆಯಂತೆ ಉತ್ತಮ ಗುಣಮಟ್ಟದ ಟೂತ್‌ಪೇಸ್ಟ್ ಬಳಸಿ ದಂತದ ಆರೋಗ್ಯ ಕಾಪಾಡಿಕೊಳ್ಳುವುದರಿಂದ ಮುಖದ ಸೌಂದರ್ಯವು ಹೆಚ್ಚಾಗಲಿದೆ. ಹಾಗಾಗಿ ಮಾಧಕ ವಸ್ತುಗಳ ಸೇವನೆಯನ್ನು ನಿಷೇಧಿಸುವಂತೆ ಮನವಿ ಮಾಡಿದರು.

ನಗರಸಭೆ ಆಯುಕ್ತ ಬಿ.ಸಿ ಬಸವರಾಜು ಮಾತನಾಡಿ, ಪೌರ ಕಾರ್ಮಿಕರ ಆರೋಗ್ಯಕ್ಕೆ ಪೂರಕವಾದ ಹಲವು ಬಗೆಯ ಆರೋಗ್ಯ ಶಿಬಿರಗಳನ್ನು ನಗರಸಭೆ ವತಿಯಿಂದ ಏರ್ಪಡಿಸಿ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳುವಲ್ಲಿ ಕೆಲವರು ವಿಫಲರಾಗುತ್ತಿದ್ದಾರೆ. ಈ ರೀತಿಯ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಪೌರ ಕಾರ್ಮಿಕರು, ಸಾರ್ವಜನಿಕರು ಹೆಚ್ಚು ಭಾಗವಹಿಸುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಜೊತೆಗೆ ಬಾಯಿ, ಹಲ್ಲುಗಳ ಸ್ವಚ್ಚತೆಗೆ ಪ್ರಾಮುಖ್ಯತೆ ನೀಡಿದರೆ ಮುಂದೆ ಬರುವ ಆರೋಗ್ಯ ತೊಂದರೆಗಳಿAದ ಮುಕ್ತರಾಗಬಹುದು ಎಂದರು.

ಹಾನಿಕಾರಕ ಶೇ. ೬೫ ರಷ್ಟು ಕೆಮಿಕಲ್ ಬಳಸಿ ಗುಟ್ಕಾ, ಪಾನ್‌ಪರಕ್ ತಯಾರಿಸಿದ್ದು, ಎಲೆ-ಅಡಿಕೆ, ಬೀಡಿ-ಸಿಗರೇಟ್ ಸೇವನೆಯಿಂದ ಮಾರಕ ಕ್ಯಾನ್ಸರ್ ಕಾಯಿಲೆ ಬರುತ್ತದೆ. ಈ ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಹರಡುವುದನ್ನು ತಡೆಗಟ್ಟಬಹುದಾಗಿದೆ ಎಂದು ಹೇಳಿದರು.

ಪೌರ ಕಾರ್ಮಿಕರಿಗೆ ನಗರದ ಕೆಆರ್‌ಎಸ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಲಿದ್ದು, ಈ ಶಿಬಿರದಲ್ಲಿ ಕಂಡುಬರುವ ರೋಗಲಕ್ಷಣಗಳ ಬಗ್ಗೆ ವೈದ್ಯರು ಸೂಚಿಸುವ ಚಿಕಿತ್ಸೆಗೆ ಸುಮಾರು ೫ ಲಕ್ಷ ರೂವರೆಗೆ ಆರೋಗ್ಯ ವಿಮೆ ಲಭ್ಯವಿದ್ದು, ಇದರ ಸೌಲಭ್ಯವನ್ನು ಸದುಪಯೋಗಪಡೆದುಕೊಳ್ಳಬೇಕು ಎಂದರು.

ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಉಪಾಧ್ಯಕ್ಷ ಡಾ. ಪ್ರೇಮಕುಮಾರ್ ಮಾತನಾಡಿ, ದೇಹದಲ್ಲಿ ಪ್ರಮುಖವಾದ ಅಂಗ ಬಾಯಿಯನ್ನು ಸ್ವಚ್ಚವಾಗಿಡುವ ಮೂಲಕ ತಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಂಡು ಸದೃಢರಾಗಿರಿ ಎಂದು ಹೇಳಿದರು.

ಪ್ರತೀ ದಿನ ಸ್ನಾನ ಮಾಡಿದರೆ ದೇಹದ ಸ್ವಚ್ಚತೆ ಆಗುತ್ತದೆ. ಅದೇ ರೀತಿ ದಿನಕ್ಕೆ ಎರಡು ಬಾರಿ ಹಲ್ಲುಗಳನ್ನು ಬ್ರಶ್ ಮಾಡಿ ನಾಲಿಗೆಯನ್ನು ಸ್ವಚ್ಚಗೊಳಿಸುವುದರಿಂದ ದಂತ ಹಾಗೂ ಹಲ್ಲುಗಳು ಹುಳುಕು ಆಗುವುದನ್ನು ತಡೆಗಟ್ಟಬಹುದಾಗಿದೆ ಎಂದರು.

ನಾವು ಸೇವಿಸುವ ಆಹಾರದ ಕ್ಯಾಲ್ಸಿಯಂ ಅಂಶಗಳು ಹಲ್ಲುಗಳ ಸಂದಿನಲ್ಲಿ ಶೇಖರಣೆಯಾಗಿ ತೊಂದರೆಯಾಗುತ್ತದೆ. ಆದ್ದರಿಂದ ಪ್ರತಿ ಆರು ತಿಂಗಳಿಗೊಮ್ಮೆ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದರೆ ಹಲ್ಲು ಸ್ವಚ್ಚವಾಗಿ, ವಸಡು ಗಟ್ಟಿಯಾಗಿ ರಕ್ಷಣೆ ಒದಗಿಸುತ್ತದೆ ಎಂದು ಸಲಹೆ ನೀಡಿದರು.

ಹಲ್ಲುಗಳ ರೂಟ್‌ಕೆನಲ್, ಇ-ಪ್ಲಾಂಟ್ ಮುಂತಾದ ಸಮಸ್ಯೆ ಬಗ್ಗೆ ದಂತ ವೈದ್ಯರನ್ನು ಭೇಟಿಮಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯುವಂತೆ ವಿನಂತಿಸಿದ ಅವರು, ಆರೋಗ್ಯ ತಪಾಸಣೆ ಮಾದರಿಯಲ್ಲಿಯೇ ಹಲ್ಲುಗಳ ತಪಾಸಣೆ ಸಹ ಮುಖ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್, ವೈದ್ಯರಾದ ಡಾ. ಪ್ರವೀಣ್, ಡಾ. ಶ್ರದ್ಧಾ, ಡಾ. ಸಂಜನಾ ಮತ್ತಿತರರಿದ್ದರು.