ಜಿಲ್ಲೆ

ಸದೃಡ ಕಬ್ಬಡಿ ತಂಡದ ಆಯ್ಕೆ ಪ್ರಕಿಯೆ!?

ಚನ್ನರಾಯಪಟ್ಟಣ:  ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಗಳಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಸದೃಡ ಕಬ್ಬಡಿ ತಂಡದ ಆಯ್ಕೆ ಪ್ರಕಿಯೆಯು ಜಿಲ್ಲಾ ಕಬ್ಬಡಿ ಆಸೋಶಿಯೇಷನ್ ನೇತೃತ್ವದಲ್ಲಿ ಪಟ್ಟಣದ ಎ1 ಸ್ಪೋರ್ಟ್ ಆಕಾಡೆಮಿ ಮೈದನಾದಲ್ಲಿ ಮಂಗಳವಾರಂದು ಜರುಗಿತ್ತು.


ಹಾಸನ ಜಿಲ್ಲಾ ಕಬ್ಬಡ್ಡಿ ಅಸೋಶಿಯೇಷನ್ ಅಧ್ಯಕ್ಷ ಸಿ.ವಿ.ತಿಮ್ಮಪ್ಪ, ಮತ್ತು ಕಾರ್ಯದರ್ಶಿ ಎನ್.ಆರ್.ತಾತೆಗೌಡ ರವರ ನೇತೃತ್ವದಲ್ಲಿ ಎ1ಸ್ಪೋರ್ಟ್ ಆಕಾಡೆಮಿ ಮೈದಾನದಲ್ಲಿ ಸಭೆ ಸೇರಿ ಆಯ್ಕೆ ಪ್ರಕ್ರಿಯೆ ನಡೆಸಿ, 13ಜನ ಆಟಗಾರರ ಸದೃಡ ತಂಡವೊಂದನ್ನು ಆಯ್ಕೆಗೊಳಿಸಿ ಜಿಲ್ಲಾ ಕಬ್ಬಡಿ ತಂಡವಾಗಿ ಘೋಷಿಸಿತ್ತು.


ಕಬ್ಬಡಿ ಅಸೋಶಿಯೇಷನ್ ಅಧ್ಯಕ್ಷ ಸಿ.ವಿ.ತಿಮ್ಮಪ್ಪ ಮಾತನಾಡಿ ಸದ್ಯವೀಗ ಆಯ್ಕೆಯಾಗಿರುವಂತ ತಂಡ ಮುಂದಿನ ಆಯ್ಕೆ ಪ್ರಕ್ರಿಯೆ ಆಗುವರೆಗೂ ಜಿಲ್ಲಾ ತಂಡವಾಗಿ ಮುಂದುವರಿಯುತ್ತದೆ. ಜನವರಿ 16, ಮತ್ತು 19 ರಂದು ರಾಜ್ಯದ ದಾವಣಗೆರೆ ಹಾಗೂ ಜಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದೆ. ಆದೇ ರೀತಿ ನಮ್ಮ ಜಿಲ್ಲೆಯ ಪುರುಷ ಹಾಗೂ ಮಹಿಳೆ, ಎರಡು ತಂಡಗಳು ಕೂಡ ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಲಿವೆ ಎಂದರು.


ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಮಹೇಶ್, ವೆಂಕಟೇಶ್ ಹಾಸನ್, ಸಂಘಟನಾ ಕಾರ್ಯದರ್ಶಿ ರಂಗನಾಥ್, ಎನ್.ಆರ್.ನಂಜೆಶೀಗೌಡ ನರಿಹಳ್ಳಿ, ಕಮಿಟಿ ಸದಸ್ಯರುಗಳಾದ ಅಶೋಕ್, ಪ್ರಕಾಶ್, ಜಿಲ್ಲಾ ತೀರ್ಪುಗಾರರಾದ ವಾಸು, ದೊರೆಸೋಸಲಗೆರೆ ರವರುಗಳು ಹಾಜರಿದ್ದು ಆಯ್ಕೆ ಪ್ರಕ್ರಿಯೆ ಯಶಸ್ವಿ ಗೊಳಿಸಿದರು.


ಕಬ್ಬಡಿ ತಂಡ: ಪುರುಷರ ಜಿಲ್ಲಾ ತಂಡಕ್ಕೆ ಆಯ್ಕಯಾಗಿ ಬಿಸಿ.ಮಧು, ಆರ್.ಎಸ್.ಸ್ವಾಮಿ, ಆದರ್ಶ್, ಸುಪ್ರೀತ್, ಯಶಸ್, ಯಶವಂತ, ಅಮಿತ್, ವಿರಾಜ್, ಅರುಣ, ಮುತ್ತಣ್ಣ, ಸುನಿಲ್, ರತನ್, ಮತ್ತು ಅಕ್ಷಯ್, ನೇಮಕಗೊಂಡಿದ್ದಾರೆ. ಮುಂದಿನ ಆಯ್ಕೆ ಪ್ರಕ್ರಿಯೆವರೆಗೂ ಇವರುಗಳು ಜಿಲ್ಲಾ ತಂಡದ ಕಬ್ಬಡ್ಡಿ ಆಟಗಾರರಾಗಿ ಮುಂದುವರಿಯಲಿದ್ದಾರೆ. ಎಂದು ಜಿಲ್ಲಾ ಅಸೋಸಿಯೇಷನ್ ತಿಳಿಸಿದೆ.