ಶೃಂಗೇರಿಯಲ್ಲಿ ತಾಲೂಕು ಶಾಲಾ ಶಿಕ್ಷಣ ಇಲಾಖೆ ಲಿಪಿಕ, ವಾಹನ ಚಾಲಕ ಮತ್ತು ಗ್ರೂಪ್ ಡಿ ನೌಕರರ ಸಂಘವನ್ನು ಬಿಇಒ ವರಲಕ್ಷ್ಮೀ ಉದ್ಘಾಟಿಸಿದರು. ಗಣೇಶ್, ದೀಪಕ್, ವಿಜಯಕುಮಾರ್, ಗಂಗಾಧರಪ್ಪ ಇದ್ದರು. 
ಜಿಲ್ಲೆ

ಸದಸ್ಯರ ಹಿತ ಕಾಪಾಡುವುದು ಉದ್ದೇಶವಾಗಲಿ

ಎಸ್.ಎನ್.ರವೀಂದ್ರ

ಶೃಂಗೇರಿ: ತಾಲೂಕಿನ ಶಿಕ್ಷಣ ಇಲಾಖೆ ಬೋಧಕೇತರ ನೌಕರರು ವಿಳಂಬಕ್ಕೆ ಅವಕಾಶ ನೀಡದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ವರಲಕ್ಷ್ಮೀ ಹೇಳಿದರು.

ಸೋಮವಾರ ಶಾಲಾ ಶಿಕ್ಷಣ ಇಲಾಖೆ ಲಿಪಿಕ, ವಾಹನ ಚಾಲಕ ಮತ್ತು ಗ್ರೂಪ್ ಡಿ ನೌಕರರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ನೌಕರರು ಹೊಂದಾಣಿಕೆ ಮೂಲಕ ಸಂಘ ರಚಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ರಜಾ ದಿನದಲ್ಲಿ ಬೋಧಕೇತರ ನೌಕರರ ಕ್ರೀಡಾಕೂಟ ಇತರ ಸಂಘದ ಚಟುವಟಿಕೆಗೂ ಅವಕಾಶ ನೀಡಲಾಗುತ್ತದೆ ಎಂದರು. ಶಿಕ್ಷಣ ಇಲಾಖೆ ಅಧೀಕ್ಷಕ ಟಿ.ಗಣೇಶ್ ಮಾತನಾಡಿ, ಸಂಘದಿಂದ ಸದಸ್ಯರ ಹಿತ ಕಾಪಾಡುವುದು ಮುಖ್ಯ ಉದ್ದೇಶವಾಗಿರಬೇಕು. ನ್ಯಾಯಯುತ ಸಮಸ್ಯೆಗೆ ಸಂಘದಿಂದ ನೆರವು ಪಡೆದುಕೊಳ್ಳಬಹುದಾಗಿದೆ ಎಂದರು. ಸಂಘದ ಅಧ್ಯಕ್ಷರಾಗಿ ಸುಬ್ರಹ್ಮಣ್ಯ, ಉಪಾಧ್ಯಕ್ಷರಾಗಿ ಬಿ.ವಿ.ಅನಂತಕುಮಾರ್ ಆಯ್ಕೆಗೊಂಡರು. ದಿನೇಶ್, ವಿಜಯಕುಮಾರ್, ಗಂಗಾಧರಪ್ಪ, ಎಸ್.ಸಿದ್ದರಾಜು ಇದ್ದರು.