ಬಾಗಲಕೋಟೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ವಿ.ಪ ಸದಸ್ಯ ಸುನೀಲಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು. 
ಜಿಲ್ಲೆ

ಸದಸ್ಯರ ಗೌರವ ಕಾಪಾಡುವ ಕೆಲಸ ಮಾಡುವೇ

ಬಾಗಲಕೋಟೆ: ಸ್ಥಳೀಯ ಸಂಸ್ಥೆಗಳ ಸದಸ್ಯರ ಬೇಡಿಕೆ, ಸಮಸ್ಯೆಗಳಿಗೆ ಸ್ಪಂದಿಸಿ ಗೌರವ ಕಾಪಾಡುವ ಕೆಲಸ ಮಾಡುವೇ ಎಂದು ವಿ.ಪ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಇನ್ನು ನಾಲ್ಕು ವರ್ಷಗಳ ಅವಽ ಇದ್ದು, ನಗರಸಭೆ, ಗ್ರಾಮ ಪಂಚಾಯಿತಿ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸದಸ್ಯರ ಗೌರವ ಧನ ಹೆಚ್ಚಳಕ್ಕೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವ ಕುರಿತು ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.

ವಿಜಯಪುರದಿಂದ ಬಾಗಲಕೋಟೆಗೆ ವಂದೇ ಭಾರತ ರೈಲು ಓಡಾಡಬೇಕು ಎಂಬುದು ನನ್ನ ಮಹದಾಸೆಯಾಗಿತ್ತು, ಆದರೆ ಅವಳಿ ಜಿಲ್ಲೆಯ ಸಂಸದರಿಂದ ಸೂಕ್ತವಾದ ಪ್ರತಿಕ್ರಿಯೆ ಬೆಂಬಲ ಸಿಗಲಿಲ್ಲ. ಅವಳಿ ಜಿಲ್ಲೆಯ ಸಂಸದರಿಗೆ ಪತ್ರ ಬರೆದರೂ ಅದಕ್ಕೆ ಸೌಜನ್ಯ ಪೂರ್ವಕವಾಗಿ ಉತ್ತರ ಕೊಡಲಿಲ್ಲ. ವಂದೇ ಭಾರತ ರೈಲಿನಿಂದ ವ್ಯಾಪಾರ ವಹಿವಾಟಿನ ಜೊತೆಯಲ್ಲಿ ಪ್ರವಾಸೋದ್ಯಮ ಭಾರಿ ಪ್ರಮಾಣದಲ್ಲಿ ಉನ್ನತಿ ಸಾಽಸಬಹುದು. ಆದರೆ ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಉತ್ತರ ಬಂದಿತ್ತಾದರೂ ಅದು ಕೂಡಾ ನಕಾರಾತ್ಮಕವಾಗಿಯೇ ಇತ್ತು,"ವಂದೇ ಭಾರತ" ರೇಲ್ವೆ ಚಾಲನೆ ಸಾಧ್ಯವೇ ಇಲ್ಲ ಎಂದು ಬಿಟ್ಟರು ಎಂದರು.

ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಶಾಸಕ ಎಚ್.ವೈ.ಮೇಟಿ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗರಾಜ ಹದ್ಲಿ, ಮುಖಂಡರಾದ ಶ್ರೀನಿವಾಸ ಬಳ್ಳಾರಿ, ಹನಮಂತ ರಾಕುಂಪಿ, ರಜಾಕ ಬೇನೂರ, ಸಂಗಣ್ಣ ಹಂಡಿ, ಬಸವಂತಪ್ಪ ಅಂಟರದಾನಿ, ದ್ಯಾಮಣ್ಣ ಗಾಳಿ, ಶಂಕರ ಮಂಕಣಿ, ಹಾಜಿಸಾಬ ದಂಡಿನ, ಚೆನ್ನವೀರ ಅಂಗಡಿ, ರಮೇಶ ಜಮಖಂಡಿ, ದೇವಿಪ್ರಸಾದ ನಿಂಬಲಗುಂದಿ, ರೇಣುಕಾ ನ್ಯಾಮಗೌಡ, ಮಂಜುಳಾ ಭೂಸಾರೆ ಇತರರು ಇದ್ದರು.