ಜಿಲ್ಲೆ

ಸದಸ್ಯತ್ವ ಸಂಖ್ಯೆ 25 ಕೋಟಿ ಮೀರಿಸುವ ಗುರಿ

ಚಿತ್ರದುರ್ಗ: ಹದಿನೆಂಟು ವರ್ಷ ವಯೋಮಿತಿ ಮೀರಿ ಯಾರೂ ಬೇಕಾದರೂ ಬಿಜೆಪಿ ಸದಸ್ಯರಾಗಬಹುದೆಂದು ಸಂಸದ ಗೋವಿಂದ ಎಂ.ಕಾರಜೋಳ ಹೇ ಳಿದರು. ನಗರದ ಐದನೇ ವಾರ್ಡ್ ಕೋಟೆ ಆಂಜನೇಯಸ್ವಾಮಿ ದೇವಾಲಯ ಬಳಿ ಬುಧವಾರ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಸಾರಿ ನಮ್ಮ ಪಕ್ಷದ ಸದಸ್ಯತ್ಯದ ಸಂಖ್ಯೆ ದೇಶದಲ್ಲಿ 25 ಕೋಟಿ ಮೀರಬೇಕಿದೆ. ಇದಕ್ಕಾಗಿ ಪಕ್ಷದ ಕಾರ‌್ಯಕರ್ತರು ಶ್ರಮಿ ಸ ಬೇಕಿದೆ ಎಂದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ,ನಗರದ 35 ವಾರ್ಡ್‌ಗಳಲ್ಲಿ ಸಮಿತಿ ರಚಿಸಿ ಹೆಚ್ಚಿನ ಸದಸ್ಯತ್ವ ನೋಂಂದಾಯಿಸಬೇಕಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸವಲತ್ತುಗಳನ್ನು ಪಡೆದವರು ಪ್ರತಿ ಮನೆಯಲ್ಲೂ ಇದ್ದಾರೆ. ಅವರಿಗೆ ಪಕ್ಷ ದ ಯೋಜನೆಗಳ ಕುರಿತು ಮನವರಿಕೆ ಮಾಡಿ ಸದಸ್ಯರನ್ನಾಗಿ ಮಾಡಬೇಕು. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಆಗ ಬೇಕೆಂದರು.
ಹರಿಯಾಣದಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆದಿರುವುದು ಇಡೀ ದೇಶದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ. ಎನ್ನುವುದಕ್ಕೆ ದಿಕ್ಸೂಚಿಯಾಗಿದೆ. ಕಾಂಗ್ರೆಸ್‌ನ ಜಾತಿ ರಾಜಕಾರಣವನ್ನು ಹರಿಯಾಣ ಜನರು ತಿರಸ್ಕರಿಸಿದ್ದಾರೆ. ಬಿಜೆಪಿಯ ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಹಾಗೂ ಸ್ಥಳೀಯ ಸಂಘಟನಾ ಶಕ್ತಿ ಕಾರಣವಾಗಿದೆ ಎಂದರು.
ನಗರಸಭೆ ಸದಸ್ಯ ಹರೀಶ್,ಮಾಜಿ ಸದಸ್ಯರಾದ ಕೃಷ್ಣಮೂರ್ತಿ,ಲಿಂಗರಾಜು,ಸಂಪತ್‌ಕುಮಾರ್,ನವೀನ್ ಚಾಲುಕ್ಯ,ರಾಮು, ನಾಗರಾಜ್‌ಬೇ ದ್ರೆ,ವಸಂತರಾವ್,ಅರುಣ್‌ಕುಮಾರ್,ರಾಜಾರಾಂ,ಶಿವಣ್ಣಾಚಾರ್,ಗಾಯತ್ರಿ ಮತ್ತಿತರರು ಇದ್ದರು.