ಜಿಲ್ಲೆ

ಸದನದಲ್ಲಿ ತಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸುವೆ

ಚಿತ್ರದುರ್ಗ: ತಮ್ಮ ಸಮಸ್ಯೆಗಳ ಕುರಿತಂತೆ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಎಂಎಲ್‌ಸಿ ಕೆ.ಎಸ್.ನವೀನ್ ಅವರು ರಾಜ್ಯವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆಗಳ ನೌಕರರಿಗೆ ಭರವಸೆ ನೀಡಿದರು.

ರಾಜ್ಯವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆಗಳ ನೌಕರರ ಜಿಲ್ಲಾ ಸಂಘದ ನೇತೃತ್ವದಲ್ಲಿ ನೌಕರರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋ ಮವಾರ ಡಿಸಿ ಕಚೇರಿ ಬಳಿ ನಡೆಸಿದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ನೌಕರರ ಮನವಿ ಸ್ವೀಕರಿಸಿ ಮಾತನಾಡಿ, ಅಧಿವೇಶನದಲ್ಲಿ ಚರ್ಚಿ ಸುತ್ತೇನೆ. ಸಮಸ್ಯೆಗಳನ್ನು ಬಗೆಹರಿಸುವಂತೆ ಸಿಎಂ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಪತ್ರ ಬರೆದು ಒತ್ತಾಯಿಸುವುದಾಗಿ ಹೇಳಿದರು.

ನ್ಯಾಯಯುತ ತಮ್ಮ ಬೇಡಿಕೆಗಳನ್ನು ಸಮಾಜ ಕಲ್ಯಾಣ ಇಲಾಖೆ ಸಚಿವರು ಶೀಘ್ರ ಪರಿಹರಿಸಲು ಸಾಧ್ಯವಿದೆ. ಇದು ಸರ್ಕಾರಕ್ಕೆ ಹೊರೆಯಾಗದು. ಇಲಾಖೆಯ ಅನುದಾನದಲ್ಲಿ ಸಾಸಿವೆ ಕಾಳಿನಷ್ಟು ಮೊತ್ತದಲ್ಲಿ ತಮ್ಮ ಸಮಸ್ಯೆಗಳೆಲ್ಲವನ್ನು ಪರಿಹರಿಸಬಹುದಾಗಿದೆ ಎಂದರು..

ಸಂಘದ ಜಿಲ್ಲಾಧ್ಯಕ್ಷ ಎಸ್.ದಸ್ತಗಿರಿ ಮಾತನಾಡಿ,ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿ ರಾಜ್ಯಾದ್ಯಾಂತ 821 ವಸತಿ ಶಾಲೆ/ಕಾಲೇಜು ಗಳಲ್ಲಿ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವಸತಿಯುತ ಶಿಕ್ಷಣವನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಕ್ರೈಸ್ ಕಾಯಂ ಬೋಧಕ,ಬೋಧ ಕೇತರ ಸಿಬ್ಬಂದಿ ಶ್ರಮದಿಂದ ವಸತಿ ಶಾಲೆಗಳು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರತಿ ವರ್ಷವೂ ಉತ್ತಮ ಗುಣಮಟ್ಟದ ಫಲಿ ತಾಂಶವನ್ನು ಪಡೆಯುತ್ತಾ ಬಂದಿವೆ.

ನವೋದಯ ವಿದ್ಯಾಲಯ ಮತ್ತು ಶಿಕ್ಷಣ ಇಲಾಖೆ ಶಾಲೆಗಳ ಅಥವಾ ಸಮಾಜ ಕಲ್ಯಾಣ ಇಲಾಖೆಯ ಆಶ್ರಮ ಶಾಲೆಗಳ ಬೋಧಕ/ಬೋಧಕೇತರಿಗೆ ದೊರೆಯುವ ಹಲವು ಸೌಲಭ್ಯಗಳು ಕ್ರೈಸ್ ವಸತಿ ಶಾಲೆಗಳ ಬೋಧಕ/ಬೋಧಕೇತರ ನೌಕರರಿಗೆ ದೊರೆಯುತ್ತಿಲ್ಲ. ವಸತಿ ಶಿಕ್ಷಣ ನಿರ್ದೇಶನಾಲಯ ರಚಿಸಬೇಕು ಅಥವಾ ಎಸ್‌ಸಿ,ಎಸ್‌ಟಿ,ಬಿಸಿ ವಸತಿ ಶಾಲೆಗಳನ್ನು ಸಿಬ್ಬಂದಿಗಳೊಂದಿಗೆ ಸಂಬಂಧಿಸಿದ ಇಲಾಖೆ ಗಳ ವಶಕ್ಕೆ ನೀಡಬೇಕು.

ಕಾಯಂ ನೌಕರರಿಗೆ ಜ್ಯೋತಿ ಸಂಜೀವಿನಿ ಅನುಷ್ಠಾನಗೊಳಿಸಬೇಕು, ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯ ಒದಗಿಸಬೇಕು, ಮ ನೆ ಬಾಡಿಗೆ ಭತ್ಯೆ ಕಡಿತದಿಂದ ವಿನಾಯಿತಿ ನೀಡಬೇಕು.ಕಾಯಂ ನೌಕರರಿಗೆ ಶೇ.10ವಿಶೇಷ ಭತ್ಯೆ ಮಂಜೂರು ಮಾಡ ಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ರಾಮಚಂದ್ರಪ್ಪ,ಎಂ.ಕೆ.ಸ್ವಾಮಿ,ಮಂಜುನಾಥ್,ಜಿ.ಬಿ.ಬಡಪ್ಪ,ನಾಗಲಾಂಬಿಕಾ, ಶಿವಕುಮಾರ್,ಮಲ್ಲಿ ಕಾರ್ಜನಯ್ಯ,ಪ್ರಕಾಶ್,ಬಸವರಾಜ್,ಗೌಸುಲ್‌ಅಜಮ್ ಇತರರರು ಇದ್ದರು.

.