ಭಾಲ್ಕಿ ತಾಲೂಕಿನ ಖಟಕಚಿಂಚೋಳಿಯ ಶ್ರೀ ಮಹಾಲಕ್ಷ್ಮೀ ದೇವಾಲಯದ ನೂತನ ಮಹಾದ್ವಾರ ನಿರ್ಮಿಸಲು ಭಕ್ತಿ ಸೇವೆ ಸಲ್ಲಿಸಿದ ಉದ್ಯಮಿ ಸಂಗೀತಾ ಬಾಲಾಜಿ ಮಾಕಾ ದಂಪತಿಗಳನ್ನು ಶ್ರೀ ವೀರುಪಾಕ್ಷ ಶಿವಾಚಾರ್ಯರು ಸನ್ಮಾನಿಸಿ ಆಶೀರ್ವದಿಸಿದರು. ಶ್ರೀ ಸೋಮೇಶ್ವರ ಶಿವಾಚಾರ್ಯರು, ಶ್ರೀ ನೀಲಕಂಠ ಸ್ವಾಮೀಜಿ ಇದ್ದರು. 
ಜಿಲ್ಲೆ

ಸತ್ಸಂಗದಿಂದ ಸತ್ಕಾರ್ಯ ಸಾಧ್ಯ

ರಾಜು ಯಮಕನಮರಡಿ

ಭಾಲ್ಕಿ: ಮನುಷ್ಯ ಸದಾ ಸತ್ಸಂಗಗಳಲ್ಲಿ ಭಾಗವಹಿಸುವುದರಿಂದ ಸತ್ಕಾರ್ಯ ಮಾಡಲು ಸಾಧ್ಯವಾಗುತ್ತದೆ ಎಂದು ಹುಡಗಿ ಕಟ್ಟಿಮನಿ ಸಂಸ್ಥಾನ ಹಿರೇಮಠದ ಶ್ರೀ ವೀರುಪಾಕ್ಷ ಶಿವಾಚಾರ್ಯರು ನುಡಿದರು.

ಖಟಕಚಿಂಚೋಳಿ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಾಲಯದ ನೂತನ ಮಹಾದ್ವಾರ ಉದ್ಘಾಟಿಸಿ ಮಹಾದ್ವಾರ ನಿರ್ಮಿಸಲು ಸೇವೆ ಸಲ್ಲಿಸಿದ ಉದ್ಯಮಿ ಸಂಗೀತಾ ಬಾಲಾಜಿ ಮಾಕಾ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದ ಶ್ರೀಗಳು, ಯುವಕರು ಕ್ಷಣಿಕ ಸುಖಕ್ಕಾಗಿ ದುಂದು ವೆಚ್ಚ ಮಾಡಿ ಅಮೂಲ್ಯವಾದ ಶರೀರ, ಸಮಯ ವ್ಯರ್ಥ ಮಾಡಿಕೊಳ್ಳುತ್ತಿರುವುದು ಖೇದಕರ ಸಂಗತಿ. ವ್ಯಕ್ತಿ ಎಷ್ಟೇ ಸಂಸಾರದ ಒತ್ತಡದಲ್ಲಿ ಸಿಲುಕಿದರೂ ಕುಟುಂಬದ ನೆಮ್ಮದಿಗಾಗಿ ಭಗವಂತನನ್ನು ಪ್ರಾರ್ಥನೆ ಮಾಡುವುದು ಅಗತ್ಯ. ಅಲ್ಪ ಆದಾಯದಲ್ಲಿ ಆನಂದಮಯ ಜೀವನ ಕಳೆಯಬೇಕು ಎಂದರು.

ಹುಡಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು ಮಾತನಾಡಿ, ಸಮಾಜೋದ್ಧಾರ ಕಾರ್ಯಗಳಿಗೆ ದಾನ, ಧರ್ಮ ಮಾಡುವುದರ ಮೂಲಕ ವ್ಯಕ್ತಿಯ ವ್ಯಕ್ತಿತ್ವ ಹೊರಹೊಮ್ಮುತ್ತದೆ. ಮಹಾದ್ವಾರ ನಿರ್ಮಾಣವಾಗಲು ಭಕ್ತಿ ಸೇವೆ ಮಾಡಿದ ಉದ್ಯಮಿ ಬಾಲಾಜಿ ಮಾಕಾ ಅವರ ನಿಸ್ವಾರ್ಥ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದರು.

ಶ್ರೀ ನೀಲಕಂಠ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಉದ್ಯಮಿ ಬಾಲಾಜಿ ಮಾಕಾ ಮಾತನಾಡಿದರು. ಮುಖಂಡರಾದ ಮಹಾರುದ್ರಪ್ಪ ಕಡಗಂಚಿ, ಪ್ರವೀಣ ಪಾಟೀಲ, ಬಸವರಾಜ ವಂಕೆ, ಸಂತೋಷ ಟೊಣ್ಣೆ, ಗುರುಶಾಂತ ಶಿವಣಕರ, ಅಶೋಕ ರಾಜೋಳೆ, ವೈಜಿನಾಥ ಮಾಕಾ, ರಾಜಶೇಖರ ಮಾಕಾ, ಮಹೇಂದ್ರ ಮಾಕಾ, ವಿಜಯಕುಮಾರ, ಕಾಶಿನಾಥ ಕಂಠೆ, ವಿಠಲ ಮಡಿವಾಳ, ಭೀಮರಾವ ಡಾವರಗಾಂವೆ, ಕೈಲಾಸ ಕಂಚಕೆ, ಸಂತೋಷ ಮಡಿವಾಳ ಇತರರಿದ್ದರು. ಎಬಿವಿಪಿ ರಾಜ್ಯ ಮುಖಂಡ ರೇವಣಸಿದ್ದ ಜಾಡರ ನಿರೂಪಣೆ ಮಾಡಿ ವಂದಿಸಿದರು. ದೇವಾಲಯದ ನೂತನ ಮಹಾದ್ವಾರ ನಿರ್ಮಾಣದ ಸಂಪೂರ್ಣ ವೆಚ್ಚ ಭರಿಸಿದ ಉದ್ಯಮಿ ಬಾಲಾಜಿ ಮಾಕಾ ದಂಪತಿಗಳನ್ನು ಸನ್ಮಾನಿಸಲಾಯಿತು.

ಶೋಭಾಯಾತ್ರೆ: ಆರಂಭದಲ್ಲಿ ಮ್ರಗಶೀರ ಮಳೆ ನಕ್ಷತ್ರ ಹಾಗೂ ಮಹಾದ್ವಾರದ ಉದ್ಘಾಟನಾ ಸಮಾರಂಭದ ನಿಮಿತ್ತ ಗ್ರಾಮದ ಪ್ರಮುಖ ಓಣಿಗಳಲ್ಲಿ ಮುತೈದೆಯರು ತಲೆ ಮೇಲೆ ಕುಂಬಕಳಸ ಹೊತ್ತು ಶೋಭಾಯಾತ್ರೆ ನಡೆಸಿದರು.