ಚಿಟಗುಪ್ಪ: ಶ್ರಾವಣ ಅತ್ಯಂತ ಪವಿತ್ರ ಮಾಸವಾಗಿದೆ. ಈ ವೇಳೆ ಧಾರ್ಮಿಕ ಸತ್ಸಂಗದಲ್ಲಿ ಪಾಲ್ಗೊಳ್ಳುವುದರಿಂದ ಶಾಂತಿ, ನೆಮ್ಮದಿ ದೊರೆಯಲಿದೆ ಎಂದು ಶಾಸಕ ರಾಜಶೇಖರ ಪಾಟೀಲ್ ಹೇಳಿದರು.
ಕೊಡಂಬಲ್ ಹಾಗೂ ಮದನಾಳದ ಹತ್ತಿರದ ಶ್ರೀ ಮುರುಗೇಂದ್ರ ಮಠದಲ್ಲಿ ಬುಧವಾರ ಶ್ರಾವಣ ಮಾಸದ ಸಮಾರೋಪ ಹಾಗೂ ಸಂಗೀತ ಪಾಠ ಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ನಾಡಿನ ಧರ್ಮಗುರುಗಳ ದರ್ಶನದಿಂದ ಈ ಭಾಗದ ಜನರ ಬಾಳು ಹಸನಾಗಲಿ. ಮಳೆ ಬೆಳೆ ಸಮೃದ್ಧವಾಗಿ ರೈತರ ಬದುಕು ಹಸನಾಗಲಿ ಎಂದರು.
ಮಲ್ಲಯ್ಯಗಿರಿಯ ಶ್ರೀ ಡಾ.ಬಸವಲಿಂಗ ಅವಧೂತರು ಆಶೀರ್ವಚನ ನೀಡಿದರು. ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು, ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯರು, ಶ್ರೀ ಮುರುಗೇಂದ್ರ ದೇವರು ಇತರರಿದ್ದರು.