ಚಿತ್ರದುರ್ಗ:ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಶುಕ್ರವಾರ ಬೆಳಗ್ಗೆ ನಗರದ ವಿವಿಧೆಡೆ ಕ್ಷಿಪ್ರ ಸಂಚಾರ ನಡೆಸಿ ನಗರದ ಸ್ವಚ್ಛತೆ ನಿರ್ವಹಣೆ ಅವಲೋಕಿಸಿದರು.
ಕುಲುಷಿತ ನೀರು ಸೇವನೆಯಿಂದ ಸಾವು-ನೋವುಗಳಾಗಿರುವ ಕವಾಡಿಗರಹಟ್ಟಿಗೆ ಭೇಟಿ ನೀಡಿದ ಲೋಕಾಯುಕ್ತರು ಅಲ್ಲಿ ತಾತ್ಕಾಲಿಕ ವಾಗಿ ತೆರೆದಿರುವ ಚಿಕಿತ್ಸಾ ಕೇಂದ್ರವನ್ನು ಪರಿಶೀಲಿಸಿದರು.
ಬೆಳಗ್ಗೆ ಅಸ್ವಸ್ಥರಾಗಿರುವ ನಾಲ್ವರ ಪೈಕಿ ಇಬ್ಬರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಬಳಿಕ ನಿವಾಸಿಗಳ ಅಹವಾಲು ಆಲಿಸಿ ದರು. ಸಂತ್ರಸ್ಥರ ಕೆಲವು ಕುಟುಂಬದರ ಜತೆ ಮಾತನಾಡಿದರು.
ಈ ವೇಳೆ ಕಾಲರಾ ಶಂಕೆ ಕುರಿತ ವರದಿಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ಕಾಲರಾ ಅಂಥ ಹೇಳುತ್ತಿದ್ದಾರೆ,ಅದನ್ನು ನಾವು ಒಪ್ಪಿಕೊಳ್ಳ ಬೇಕಿದೆ ಎಂದು ಅಸಹಾಯ ಕತೆ ವ್ಯಕ್ತಪಡಿಸಿದರು. ಸ್ವಚ್ಛತಾ ಕಾರ‌್ಯದೆಡೆಯೂ ಸ್ಥಳೀಯರು ಬೇಸರ ವ್ಯಕ್ತಪಡಿಸಿದರು. ಘಟನೆ ಆದ ಅಂದಿನಿಂದ ನೀರಗಂಟಿ ಪತ್ತೆ ಇಲ್ಲ. ಘಟನೆ ಆದ ಅಂದಿನಿಂದ ದುಡಿಯಲು ಹೋಗಲು ಸಾಧ್ಯವಾಗುತ್ತಿಲ್ಲವೆಂದು ಹೇಳಿದರು.
ಮೃತ ಮಂಜುಳಾ ಅವರಿಗೆ,ಚಿಕಿತ್ಸೆ ನೀಡಿದ ವೈದ್ಯರ ಹೇಳಿಕೆ,ಕೇಸ್‌ಶೀಟ್ ಪರಿಶೀಲನೆ,ಚಿಕಿತ್ಸೆ ವಿವರಗಳೊಂದಿಗೆ ವರದಿ ಸಲ್ಲಿಸಬೇಕು, ವೈಯಕ್ತಿಕ ಶೌಚಲಯಗಳ ನಿರ್ಮಾಣ,ಕುಡಿವ ನೀರಿನ ಸರಿಯಾಗಿ ಪೂರೈಸಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು. ಧೈರ್ಯದಿಂದ ಇರಿ,ಪ್ರಕರಣದ ಸಂಪೂರ್ಣ ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಸತ್ಯವನ್ನು ಮುಚ್ಚಿಡಲಾಗದೆಂದು ಲೋಕಾಯುಕ್ತರು ಭರವಸೆ ನೀಡಿದರು.
ಚಿಕಿತ್ಸಾ ಕೇಂದ್ರಕ್ಕೆ ನಂತರ ಹಾಜರಾದ ವೈದ್ಯರಿಗೆ,ಹೀಗೆ ನೀವಿಲ್ಲದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಮತ್ತೊಬ್ಬ ವೈದ್ಯರೊಂದಿಗೆ ಚಿಕಿತ್ಸೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು. ನಂತರ ಲೋಕಾಯುಕ್ತರು ಬಸವೇಶ್ವರ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು. ಮಲ್ಲಾಪುರ ಹಾಗೂ ಮುರುಘಾಮಠದ ಕೆರೆಗೆ ಕಲುಷಿತ ನೀರು ಹೋಗುವುದನ್ನು ತಡೆಯುವಂತೆ ಡಿಸಿಗೆ ಸೂಚಿಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ವರದಿಗೆ ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಸಿದರು. ನಗರದ ಅಸ್ವಚ್ಛಗೆ ಸಂಬಂಧಿಸಿದಂತೆ ಬೇಸರ ವ್ಯಕ್ತಪಡಿಸಿದರು. ಕೊಳವೆಬಾವಿಗಳಿಂದ ಪೂರೈಯಾಗುತ್ತಿರುವ ನೀರಿನ ಪರಿಶೀಲನೆಗೆ ಡಿಸಿಗೆ ತಿಳಿಸಿದರು.