ಝುಂಜರವಾಡ ಗ್ರಾಮದಲ್ಲಿ ಬಡ ಜನರಿಗೆ ಸತ್ಯ ಸಂಗಮ ಪ್ರತಿಷ್ಠಾನ ವತಿಯಿಂದ ಬಿಜೆಪಿ ಯುವ ಮುಖಂಡ ಚಿದಾನಂದ ಸವದಿ ಆಹಾರ ದಾನ್ಯ ಕಿಟ್ ವಿತರಿಸಿದರು. ಶಂಕರಗೌಡ ಬಸನಗೌಡರ, ಜಿನಗೌಡ ಪಾಟೀಲ, ಬಾಹುಬಲಿಗೌಡ ಪಾಟೀಲ, ಭೀಮಪ್ಪ ಮಹಿಷವಾಡಗಿ, ಮುತ್ತಣ್ಣ ಯಂಡೊಳ್ಳಿ, ಮುತ್ತಪ್ಪ ಹಿಡಕಲ್ ಇದ್ದರು. 
ಜಿಲ್ಲೆ

ಸತ್ಯ ಸಂಗಮ ಪ್ರತಿಷ್ಠಾನ ಸೇವೆ ಸ್ಮರಣೀಯ

ಕೊಕಟನೂರ: ವೇದವನ್ನು ಓದಿದವರಿಗಿಂತ ಜನರ ವೇದನೆ ಅರಿತವರು ದೊಡ್ಡವರು. ಆ ನಿಟ್ಟಿನಲ್ಲಿ ಕರೊನಾ ಮಹಾಮಾರಿಗೆ ನಲುಗಿದ ಜನರಿಗೆ ಅಭಯಹಸ್ತ ನೀಡುತ್ತಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಎಲ್ಲರಿಗೂ ಪ್ರೇರಣೆ ಆಗಿದ್ದಾರೆ ಎಂದು ಪಿಕೆಪಿಎಸ್ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಬಾಹುಬಲಿಗೌಡ ಪಾಟೀಲ ಹೇಳಿದರು. ಅಥಣಿ ತಾಲೂಕಿನ ಝುಂಜರವಾಡ, ಸುಟ್ಟಟ್ಟಿ ಹಾಗೂ ಶಿರಹಟ್ಟಿ ಗ್ರಾಮಗಳಲ್ಲಿ ಭಾನುವಾರ ಸತ್ಯ ಸಂಗಮ ಪ್ರತಿಷ್ಠಾನ ವತಿಯಿಂದ 4,600 ಬಡಜನರಿಗೆ ಹಾಗೂ ಕರೊನಾ ಸೇನಾನಿಗಳಿಗೆ ಉಚಿತ ಆಹಾರ ಧಾನ್ಯ ಕಿಟ್ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಅಧಿಕಾರದ ಹೊರತಾಗಿಯೂ ಸವದಿ ಅವರಲ್ಲಿ ಒಬ್ಬ ವಿಶೇಷ ನಾಯಕನಿದ್ದಾನೆ. ಜನರು ಸಂಕಷ್ಟದಲ್ಲಿದ್ದಾಗ ಆ ನಾಯಕ ಸಹಾಯಕ್ಕೆ ಬರುತ್ತಾನೆ.

ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಜನರನ್ನು ಅವರು ಮರೆತಿಲ್ಲ ಎಂದರು. ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ಕರೊನಾ ಸೋಂಕಿನಿಂದ ಲಾಕ್‌ಡೌನ್ ಮಾಡಿರುವ ಹಿನ್ನೆಲೆಯಲ್ಲಿ ದುಡಿಯುವ ಕೈಗಳಿಗೆ ಕೆಲಸವಿಲ್ಲ. ಅದನ್ನರಿತು ನಮ್ಮ ತಂದೆ ಲಕ್ಷ್ಮಣ ಸವದಿ ಅವರು ಆಹಾರ ಧಾನ್ಯ ಕಿಟ್ ವಿತರಿಸುವ ಮೂಲಕ ಅಳಿಲು ಸೇವೆ ಮಾಡುತ್ತಿದ್ದಾರೆ ಎಂದರು.

ಸಿಪಿಐ ಶಂಕರಗೌಡ ಬಸನಗೌಡರ, ಭೀಮಪ್ಪ ಮಹಿಷವಾಡಗಿ, ಜಿನಗೌಡ ಪಾಟೀಲ, ಮುತ್ತಣ್ಣ ಯಂಡೊಳ್ಳಿ, ವೆಂಕಣಗೌಡ ಪಾಟೀಲ, ಮುತ್ತಪ್ಪ ಹಿಡಕಲ್, ಅಪ್ಪಾಸಾಬ ಪಾಟೀಲ, ಮಹಾದೇವ ಚಿಪ್ಪಾಡಿ, ಭೀಮಪ್ಪ ಆಸಂಗಿ, ಹನುಮಂತ ಕರಜಗಿ, ಸಾಬು ಮಾಳಿ, ಸಂಭಾಜಿ ಗುರ್ಲಾಪುರ, ಸಚಿನ ಬುರ್ಲಿ, ಸುಶೀಲಕುಮಾರ ಪತ್ತಾರ, ಸಿದ್ದಪ್ಪ ಹಿಪ್ಪರಗಿ, ಸಂಜು ತೇಲಿ, ಅಪ್ಪಾಸಾಬ ದಾನಗೌಡ, ಮಲ್ಲಪ್ಪ ಕಾಶೀದ್ ಇತರರು ಉಪಸ್ಥಿತರಿದ್ದರು.