ಯಡ್ರಾಮಿಯಲ್ಲಿ ಗಾಣಿಗ ಸಮಾಜದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಮುಖಂಡ ಶಿವಲಾಲ್‌ಸಿಂಗ್ ಉದ್ಘಾಟಿಸಿದರು. ಶ್ರೀ ಜಯಬಸವಕುಮಾರ ಸ್ವಾಮೀಜಿ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ರಮೇಶ ಭೂಸನೂರ, ಶಿವರಾಜ ಪಾಟೀಲ್ ರz್ದೆÃವಾಡಗಿ, ಮಡಿವಾಳಪ್ಪಗೌಡ ಪಾಟೀಲ್ ಮಾಗಣಗೇರಿ, ಸುರೇಶ ಸಜ್ಜನ್, ಶಿವಾನಂದ ದ್ಯಾಮಗೊಂಡ, ಭೀಮರಾವ ಗುಜಗುಂಡ, ಶ್ರೀಶೈಲಗೌಡ ಬಿರಾದಾರ ಇದ್ದರು.  
ಜಿಲ್ಲೆ

ಸತ್ಯ ಶುದ್ಧ ಕಾಯಕ ನಿಮ್ಮದಾಗಿರಲಿ

ಯಡ್ರಾಮಿ: ಶರಣರ ನಾಡಿನಲ್ಲಿರುವ ನಾವು ಸತ್ಯ ಶುದ್ಧ ಹಾಗೂ ಪರಿಶ್ರಮದಿಂದ ಕಾಯಕ ಮಾಡಿ ಬದುಕಬೇಕು. ಸಮಾಜದಲ್ಲಿ ದೊಡ್ಡವರಾಗಿ ಬದುಕಲು ಕೇವಲ ಜಾತಿ ಇದ್ದರೆ ಸಾಲದು, ಜತೆಗೆ ನೀತಿ ಇರಬೇಕು ಎಂದು ವಿಜಯಪುರದ ಗಾಣಿಗ ಗುರು ಪೀಠ, ವನಶ್ರೀ ಸಂಸ್ಥಾನ ಮಠದ ಶ್ರೀ ಗುರುಬಸವಕುಮಾರ ಸ್ವಾಮೀಜಿ ಸಲಹೆ ನೀಡಿದರು.

ಗುತ್ತೇದಾರ್ ಲೇಔಟ್‌ನಲ್ಲಿ ಯಡ್ರಾಮಿ-ಜೇವರ್ಗಿ ತಾಲೂಕು ಗಾಣಿಗ ಸಮಾಜದ ಯುವ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಗಾಣಿಗ ಸಮಾಜದ ತಾಲೂಕು ಯುವ ಘಟಕ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಯುವಕರಿಗೆ ಸಂಸ್ಕಾರಯುತ ಶಿಕ್ಷಣ ಹಾಗೂ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಸಂಘಟನೆ ಬಲಿಷ್ಟಗೊಳಿಸುವ ಅವಶ್ಯವಿದೆ ಎಂದರು.
ಮಾಜಿ ಶಾಸಕರಾದ ರಮೇಶ ಭೂಸನೂರ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉÃವಾಡಗಿ ಮಾತನಾಡಿದರು. ಮುಖಂಡ ಶಿವಲಾಲ್‌ಸಿಂಗ್ ಉದ್ಘಾಟಿಸಿದರು.

ಪ್ರಮುಖರಾದ ಮಡಿವಾಳಪ್ಪಗೌಡ ಪಾಟೀಲ್ ಮಾಗಣಗೇರಿ, ಮಲ್ಲಿನಾಥಗೌಡ ಪಾಟೀಲ್ ಯಲಗೋಡ, ಶಿವಾನಂದ ದ್ಯಾಮಗೊಂಡ, ಮಲ್ಲಿಕಾರ್ಜುನ ಲೋಣಿ, ಶಿವಯೋಗಪ್ಪ ನೇದಲಗಿ, ಅಪ್ಪಾರಾಯಗೌಡ ಪಾಟೀಲ್, ಸುರೇಶ ಸಜ್ಜನ್, ಗುರಣ್ಣಗೌಡ ಪಾಟೀಲ್ ನಾಗಾವಿ, ರವೀಂದ್ರ ಸಜ್ಜನಶೆಟ್ಟಿ, ಯಶವಂತರಾಯಗೌಡ ರೂಗಿ, ಮಲ್ಲಣ್ಣ ಮನಗೂಳಿ, ಎ.ಎಸ್.ಗಾಣಿಗೇರ, ಶರಣಕುಮಾರ ಬಿಲ್ಲಾಡ, ಭೀಮರಾವ ಗುಜಗೊಂಡ, ಸಂಗಣ್ಣಗೌಡ ಪಾಟೀಲ್ ಕಲ್ಲೂರ, ಡಾ.ಕೇಶವರಾಯ ಕಾಭಾ, ದೇವಿಂದ್ರ ಬಿರಾದಾರ, ಶಿವರಾಜ ಖಾನಗೌಡರ, ಮಲ್ಲಣ್ಣ ಬಂಗಾರಿ, ಶ್ರೀಶೈಲಗೌಡ ಬಿರಾದಾರ, ರೇವಣಸಿದ್ದಪ್ಪ ಸಂಕಾಲಿ, ಎಸ್.ಕೆ.ಬಿರಾದಾರ, ನಾಗಪ್ಪ ಸಜ್ಜನ್, ಸಿದ್ದನಗೌಡ ಪಾಟೀಲ್ ಮಾಗಣಗೇರಿ, ಸುರೇಶ ಪಾಟೀಲ್ ನೇದಲಗಿ, ಆನಂದ ಯತ್ನಾಳ, ವಿಶ್ವನಾಥ ಪಾಟೀಲ್, ಶಂಕರಗೌಡ ಸುಂಬಡ ಇತರರಿದ್ದರು.

ಟಾಪರ್‌ಗಳಿಗೆ ಸತ್ಕಾರ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯಿಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು ಟಾಪರ್ ಆಗಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. 2021-2026ರ ಅವಧಿಯಲ್ಲಿ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಗಾಣಿಗ ಸಮಾಜದ ಚುನಾಯಿತ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರನ್ನು ಸನ್ಮಾನಿಸಲಾಯಿತು.