ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಗ್ರಾಮದ ಪ್ರೌಢಶಾಲೆಗೆ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.52.22 ರಷ್ಟು ಫಲಿತಾಂಶ ದೊರೆತಿದೆ.
ಒಟ್ಟು 37 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 20 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 6, ಪ್ರಥಮ ದರ್ಜೆಯಲ್ಲಿ 7, ದ್ವಿತೀಯ ದರ್ಜೆಯಲ್ಲಿ ಒಬ್ಬ ವಿದ್ಯಾರ್ಥಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಎಂ.ಶ್ರೇಯಾ 625 ಕ್ಕೆ 584, ಎಂ.ಐಶ್ವರ್ಯ 570, ಸಿ.ಎಸ್.ಅಂಶಿಕ 542, ಜೆ.ಶಿಲ್ಪಾ 542 ಹಾಗೂ ವಿ.ಲಕ್ಷ್ಮೀ 541 ಅಂಕ ಪಡೆದು ಸಾಧನೆ ಮಾಡಿದ್ದಾರೆ.