ಜಿಲ್ಲೆ

ಸತ್ತೇಗಾಲ ಗ್ರಾಪಂ ಅಧ್ಯಕ್ಷರಾಗಿ ಎಂ.ಮಲ್ಲೇಶ್ ಆಯ್ಕೆ

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ.ಮಲ್ಲೇಶ್ ಅವಿರೋಧ ಆಯ್ಕೆಯಾದರು.

ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಚುನಾವಣೆ ನಿಗದಿಯಾಗಿತ್ತು. ಮಲ್ಲೇಶ್ ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸುರೇಂದ್ರ ಕುಮಾರ್ ಘೋಷಣೆ ಮಾಡಿದರು.

ಸತ್ತೇಗಾಲ ಗ್ರಾ.ಪಂ ಉಪಾಧ್ಯಕ್ಷೆ ಎಂ.ಎಸ್. ಸುವರ್ಣಾ, ಸದಸ್ಯರಾದ ಕುಮಾರಮ್ಮ, ನಾಗರಾಜು, ದೇವಿಕಾ, ದೇವಮ್ಮ, ನಾಗರಾಜು, ವೆಂಕಟನಾಯಕ, ನವೀನ್ ಕುಮಾರ್, ಲತಾ, ಜ್ಯೋತಿ, ಎಸ್.ಶಾಂತಾಕುಮಾರಿ, ಕವಿತಾ, ಗೋವಿಂದರಾಜು, ಮಲ್ಲೇಶ್, ಸೈಯದ್ ಜಮೀರ್ ಪಾಷ, ಮರಿನಿಂಗೇಗೌಡ, ರಾಜಮ್ಮ, ಪುಷ್ಪಾ, ಆರೋಗ್ಯ ಸ್ವಾಮಿ, ಭೈರ, ವಸಂತಮೇರಿ, ಶಿವಮಲ್ಲಮ್ಮ, ವಸಂತ, ನಾಗಣ್ಣ, ಲತಾ, ಪಿಡಿಒ ಜುನೈದ್ ಅಹಮ್ಮದ್, ಕಾರ್ಯದರ್ಶಿ ಶಿವಪ್ರಕಾಶ್ ಇದ್ದರು.