ಆನಂದಪುರ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿಗೆ ಸಮೀಪದ ಯಡೇಹಳ್ಳಿ ಗ್ರಾಪಂ ವ್ಯಾಪ್ತಿಯ ಇರುವಕ್ಕಿ ಗ್ರಾಮದ ರಾಮಪ್ಪ ಎಂಬುವರ ಮನೆ ಮಂಗಳವಾರ ಮಧ್ಯಾಹ್ನ ನೋಡು ನೋಡುತ್ತಿದ್ದಂತೆ ಕುಸಿದು ಬಿದ್ದಿದೆ. ಛಾವಣಿ ಪಕಾಶಿಗಳು ಮುರಿಯುತ್ತಿರುವ ಜೋರಾದ ಶಬ್ಧ ಕೇಳಿ ಜಾಗೃತಗೊಂಡು ಮನೆಯ ಸದಸ್ಯರಿಗೆ ಹೊರಗೆ ಹೋಗುವಂತೆ ಸೂಚಿಸಿದರು. ಮನೆಯ ಯಜಮಾನ ರಾಮಪ್ಪ ಜೋರಾಗಿ ಹೊರಗೆ ಓಡುವ ರಭಸದಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಮನೆ ಮಂದಿಯೆಲ್ಲ ಅಪಾಯದಿಂದ ಪಾರಾಗಿದ್ದಾರೆ.