ಯಾದಗಿರಿ: ಸತತ ಶ್ರಮ ಮತ್ತು ಪ್ರಯತ್ನದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಶಾಸಕ ಚನ್ನಾರಡ್ಡಿ ಪಾಟೀಲï ತುನ್ನೂರ ಹೇಳಿದರು.
ಚಿತ್ತಾಪುರ ರಸ್ತೆಯಲ್ಲಿರುವ ಆರ್ಯಭಟ್ಟ ಪಿಯು ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡ ನೀಟ್ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕರ‍್ಯಕ್ರಮದಲ್ಲಿ ಮಾತನಾಡಿದ ಅವರ, ವಿದ್ಯಾರ್ಥಿ ಜೀವನ ಬಂಗಾರದ ಜೀವನ ಎನ್ನುತ್ತೇವೆ. ಈ ವೇಳೆ ಬೇರೆ ಕಡೆ ಗಮನ ಹರಿಸದೇ ಅಭ್ಯಾಸಕ್ಕೆ ಮೊದಲ ಆದ್ಯತೆ ನೀಡಿದರೆ ಫಲಿತಾಂಶದಲ್ಲಿ ಮೊದಲ ಸ್ಥಾನ ನಿಮ್ಮದಾಗುತ್ತದೆ ಎಂದು ಹೇಳಿದರು.
ಹಿಂದುಳಿದ ಜಿ¯್ಲೆ, ಫಲಿತಾಂಶದಲ್ಲಿ ಕೊನೇ ಸ್ಥಾನ ಎಂಬ ಮಾತುಗಳ ನಡುವೆ ಆರ್ಯಭಟ್ಟ ಪಿಯು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಜಿ¯್ಲÉಯ ಹೆಸರು ಉಚ್ಛ ಸ್ಥಾನಕ್ಕೆ ತೆಗೆದುಕೊಂಡು ಹೊಗಿದ್ದು ಸಂತಸ ತಂದಿದೆ ಎಂದರು.
ಇದಕ್ಕೆ ಕಾಲೇಜು ಆಡಳಿತ ಮಂಡಳಿ, ಶಿP್ಷÀಕ ವೃಂದದ ಬೋಧನೆ, ಪರಿಶ್ರಮಪಟ್ಟ ವಿದ್ಯಾರ್ಥಿಗಳ ಹಾಗೂ ಪಾಲಕರ ಸಹಕಾರವೇ ಇದಕ್ಕೆ ಕಾರಣ. ಪ್ರಸ್ತಕ ಸಾಲಿನ ಮಕ್ಕಳು ಸಾಧನೆ ಮಾಡಿದ ವಿದ್ಯಾರ್ಥಿಗಳ ಸಲಹೆ ಪಡೆದು ನೀವು ಇನ್ನೂ ಹೆಚ್ಚಿನ ಸಾಧನೆ ಮಾಡಿ ಎಂದು ಹೇಳಿದರು.
ಮುಖ್ಯ ಅತಿಥಿ ಮೆಡಿಕಲï ಕಾಲೇಜಿನ ಡಿನ್ ಡಾ.ಸಂದೀಪ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗುರಿ ನಿರಂತರ ಪ್ರಯತ್ನ, ತಾಳ್ಮೆ, ಕನಸು ಮತ್ತು ಓದುವ ಅಭ್ಯಾಸ ಇದ್ದರೆ ಇಂತಹ ಸಾಧನೆಗೆ ಸುಲಭ ಜಯ ಸಿಗುತ್ತದೆ ಎಂದರು. ನೀಟ್ ಪರೀಕ್ಷೆಯಲ್ಲಿ ಪಾಸಾದ ನಿಮ್ಮ ಅಧ್ಯಯನದ ಆರಂಭ ಈಗ ಶುರುವಾಗುತ್ತದೆ. ಎಂಬಿಬಿಎಸ್, ಎಂಡಿ ಓದಿ ರೋಗಿಗಳ ಸೇವೆಗೆ ಅಣಿಯಾಗುವವರೆಗೂ ಛಲದಂಕ ಮಲ್ಲನಂತೆ ಶ್ರಮ ಹಾಕಿ ಎಂದು ಡಾ.ಸಂದಿಪ್ ಸಲಹೆ ನೀಡಿದರು.
ಸಂಸ್ಥೆ ಅಧ್ಯP್ಷÀ ಸುಧಾಕರ ರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಜಿ¯್ಲÉಯ ಪ್ರತಿಭೆಗಳು ನಮ್ಮಲ್ಲಿಯೇ ಅರಳಿ ಸಾಧನೆಯ ಉತ್ತುಂಗಕ್ಕೆ ಏರಲಿ ಎಂಬ ಉz್ದÉÃಶದಿಂದ ಆರಂಭಿಸಿದ ಶಿP್ಷÀಣ ಸಂಸ್ಥೆಗೆ ಇಂದು ಈ ಆರು ಮಕ್ಕಳು ವಿಶೇಷ ಸಾಧನೆ ಮಾಡುವ ಮೂಲಕ ನಮ್ಮ ಕನಸು ನನಸಾಗಿಸಿz್ದÁರೆ ಎಂದರು.
ನಿರ್ದೇಶಕ ಅರವಿಂದಕೃಷ್ಣ ಮಾತನಾಡಿದರು. ಸನ್ಮಾನಗೊಂಡ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊAಡರು. ಸಂಸ್ಥೆ ಫೌಂಡರ್ ವೆಂಕಟರಡ್ಡಿ ಅನಪುರ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಾರ್ಚಾಯ ಹರಿನಾಧರಡ್ಡಿ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆ ಹಾಡಿದರು. ಜಿ¯್ಲÁ ಕಾಂಗ್ರೆಸ್ ಅಧ್ಯP್ಷÀ ಬಸರಡ್ಡಿ ಅನಪುರ ವಂದಿಸಿದರು. ಈ ವೇಳೆ ನೀಟ್‌ನಲ್ಲಿ ವಿಶೇಷ ಸಾಧನೆ ಮಾಡಿದ ಸಾಕ್ಷಿ, ಕನೀಜಾ ಹಫ್ಸಾ, ರಾಧಿಕಾ ಜಿ., ಫಾತಿಮಾ ಜೋಹ್ರಾ, ಉತ್ತಿ ವೈಷ್ಣವಿ ಹಾಗೂ ಲಿಂಗೇಶ್ ಅವರನ್ನು ಸನ್ಮಾನಿಸಲಾಯಿತು.