ಅಥಣಿ ಪಟ್ಟಣದಲ್ಲಿ ಗಂಗಾಮತಸ್ಥ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಿತು. ಗಂಗಾರಾಮ ತಳವಾರ, ಫಕೀರಪ್ಪ ಜುಂಜನ್ನವರ, ಎಸ್.ಕೆ.ಹೊಳೆಪ್ಪನವರ, ವಿನೋದ ಡಂಗೆ ಇತರರಿದ್ದರು. 
ಜಿಲ್ಲೆ

ಸತತ ಅಧ್ಯಯನದಿಂದ ಯಶಸ್ಸು ಸಾಧ್ಯ

ಅಥಣಿ: ಸತತ ಅಧ್ಯಯನ ಹಾಗೂ ಸಾಸುವ ಛಲ ಇದ್ದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಗಂಗಾಮತ ಸಮುದಾಯದ ಮಾಜಿ ಜಿಲ್ಲಾಧ್ಯಕ್ಷ ಗಂಗಾರಾಮ ತಳವಾರ ಹೇಳಿದರು.

ಪಟ್ಟಣದ ನೌಕರರ ಭವನದಲ್ಲಿ ಈಚೆಗೆ ಏರ್ಪಡಿಸಿದ್ದ ಗಂಗಾಮತ ಸಮುದಾಯದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭದ ಮಾತನಾಡಿ, ಸಾಧನೆಗೆ ಬಡತನ ಮತ್ತು ಅಂಗವೈಕಲ್ಯ ಮೆಟ್ಟಿ ನಿಂತು ಸಾಧನೆ ಮಾಡಿದ ಸಾಧಕರ ನಿದರ್ಶನಗಳು ಸಾಕಷ್ಟಿವೆ. ಆತ್ಮವಿಶ್ವಾಸದಿಂದ ಗುರಿ ಸಾಧನೆಗೆ ಮುನ್ನುಗ್ಗಬೇಕು ಎಂದರು.

ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸುವುದು ಮುಖ್ಯ. ಸಂಸ್ಕಾರ ಕಲಿತವ ಕಾಯಕದ ಜತೆಗೆ ಸಮಾಜದ ಶಕ್ತಿಯಾಗಿ ಬೆಳೆಯುತ್ತಾನೆ. ಸಾಧನೆಗೆ ಛಲ, ಶ್ರದ್ಧೆ ಮತ್ತು ತಾಳ್ಮೆ ರೂಢಿಸಿಕೊಳ್ಳಬೇಕು ಎಂದರು.

ಸಮುದಾಯದ ಚಿಕ್ಕೋಡಿ ಅಧ್ಯಕ್ಷ ಎಸ್.ಕೆ.ಹೊಳೆಪ್ಪನವರ, ಬೆಂಗಳೂರು ನಗರ ಅಬಕಾರಿ ಅೀಕ್ಷಕ ವಿನೋದ ಡಂಗೆ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಾಹಿತಿ ಬಸವರಾಜ ಸುಣಗಾರ, ಕಿಶೋರ ಶಿರಗೆ, ಮಹಾಂತೇಶ ನಿಟ್ಟೂರ ಅವರನ್ನು ಸತ್ಕರಿಸಲಾಯಿತು. ಫಕೀರಪ್ಪ ಜುಂಜನ್ನವರ, ರಮೇಶ ಗಸ್ತಿ, ಯಲ್ಲಪ್ಪ ಡಿಗ್ಗಿ, ಎಸ್.ಸಿ.ಗಂಗಾಪೂರ, ಲೀಲಾವತಿ ಬಾರಕೇರ, ವೀರಭದ್ರ ದುಂಡಗಿ, ನಾರಾಯಣ ಅಣಿಖಿಂಡಿ, ಪ್ರವೀಣ ಪಲ್ಲೇದ, ಸಣ್ಣಪ್ಪ ಮೀಸಿ, ಜೀವನ ಶಿರಗೆ, ದೀಪಕ ಗಸ್ತಿ, ಕೈಲಾಸ ಮದಬಾವಿ ಇತರರಿದ್ದರು.