ಜಿಲ್ಲೆ

ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಮೂಲಭೂತ ಸೌಕರ್ಯಕ್ಕೆ ಕ್ರಮವಹಿಸಲು ಸೂಚನೆ

Hassan - Ramesh H R

ಹಾಸನ: ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಕರ್ಯ ಪೂರೈಸುವ ನಿಟ್ಟಿನಲ್ಲಿ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಧಿಕಾರಿಗಳಿಗೆ ಸೂಚನೆ ನೀಡಿದರು..

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕೈಗಾರಿಕಾ ಸ್ಪಂದನಾ ಸಭೆಯಲ್ಲಿ ಅವರು ಮಾತನಾಡಿ, ಹೊಸದಾಗಿ ಕೈಗಾರಿಕೆ ಸ್ಥಾಪಿಸುವವರಿಗೆ ಅವಕಾಶ ಕಲ್ಪಿಸಬೇಕು. ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ ಸೌಲಭ್ಯ ಕೂಡ ಒದಗಿಸಬೇಕು, ಸಭೆಯಲ್ಲಿ ಹಾಜರಿದ್ದ ಕೈಗಾರಿಕಾ ಸಂಘದ ಅಧ್ಯಕ್ಷ ಕಿರಣ್ , ಪ್ರಕಾಶ್ ಯಾಜಿ, ಮಾಹಾಂತಪ್ಪ ಮತ್ತಿತರರು ಕೈ ಗಾರಿಕಾ ಪ್ರದೇಶದಲ್ಲಿ ಇರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ಸರ್ಕಾರದ ಯೋಜನೆ , ಕಾರ್ಯಕ್ರಮಗಳನ್ನು ಆದ್ಯತೆ ಮೇರೆಗೆ ಕಾರ್ಯನಿರ್ವಹಣೆ ಮಾಡಬೇಕು. ಎಸ್.ಇ.ಜೆಡ್ ಯೋಜನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.ದೊಡ್ಡ ಕಂಪನಿಗಳಿಗೆ ದೊಡ್ಡ ಜಾಗ ಒದಗಿಸುವ ಬದಲು ಶೇ 50% ಜಾಗವನ್ನು ಸಣ್ಣ ಮತ್ತು ಮಧ್ಯಮ ಪ್ರಮಾಣ ಕೈಗಾರಿಕೆಗಳಿಗೆ ಜಾಗ ಒದಗಿಸುವಂತೆ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಕಿರಣ್ ಹಾಗೂ ಇತರ ಪದಾಧಿಕಾರಿಗಳು ಮನವಿ ಮಾಡಿದರು.

ಮಹಿಳಾ ಕೈಗಾರಿಕೊದ್ಯಮಿಗಳಿಗೂ ಕ್ಲಸ್ಟರ್ ಆಧಾರದ ಮೇಲೆ ಜಾಗ ಒದಗಿಸಲು ಅಗತ್ಯ ಕ್ರಮವಹಿಸಿ, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಆಗಬೇಕು ಹೊಸ ಹೊಸ ರೀತಿಯ ಕೈಗಾರಿಕೆ ಬರಬೇಕು ಉತ್ಪನ್ನಗಳ ಮೌಲ್ಯವರ್ಧನೆಗೆ ಗಮನಹರಿಸಿ ಎಂದು ಡಿಸಿ ಹೇಳಿದರು.

ಜಿಲ್ಲೆಯಲ್ಲಿ ಯುವಕರಿಗೆ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಯಾಗಬೇಕು, ಆ ನಿಟ್ಟಿನಲ್ಲಿ ಕೈಗಾರಿಕಾಭಿವೃದ್ದಿ ಇಲಾಖೆ , ಸಣ್ಣ ಕೈಗಾರಿಕಾ ಸಂಘ ಗಮನ ಹರಿಸಬೇಕು. ಫ್ಲಾಟೆಡ್ ಕೈಗಾರಿಕೆಗಳನ್ನು ಮಾಡಬಹುದಾಗಿದೆ, ಈ ಬಗ್ಗೆ ಪರಿಶೀಲಿಸಿ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಕೈಗಾರಿಯ ಇಲಾಖೆ ಜಂಟಿ ನಿರ್ದೇಶಕರಾದ ಸಿದ್ದರಾಜು ಅವರು ಜಿಲ್ಲೆಯಲ್ಲಿ ಸಣ್ಣ ಹಾಗೂ ದೊಡ್ಡ ಕೈಗಾರಿಕೆಗಳ ಸ್ಥಿತಿಗತಿ ಸ್ಥಳಾವಕಾಶ ಮತ್ತಿತರರ ವಿಷಯಗಳನ್ಮು ಸಭೆಯ ಗಮನಕ್ಕೆ ತಂದರು.

ಜಿಲ್ಲಾ ವಾಣಿಜ್ಯೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಮದನ್ ,ಕಾಸಿಯಾ ಪ್ರತಿನಿಧಿ ಪ್ರಕಾಶ್ ಯಾಜಿ , ಜಿಲ್ಲಾ ಪಂಚಾತಿಯಿ ಉಪ ಕಾರ್ಯದರ್ಶಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.