ಜಿಲ್ಲೆ

ಸಜನಾ ಸಾಧನೆ ಯುವ ಜನಾಂಗಕ್ಕೆ ಆದರ್ಶ

ಬೆಳಗಾವಿ: ವೈದ್ಯ ವಿಜ್ಞಾನಿ ಡಾ.ಸ.ಜ.ನಾಗಲೋಟಿಮಠ ತಮ್ಮ ಸಾಧನೆಯಿಂದ ಬೆಳಗಾವಿಗೆ ರಾಷ್ಟ್ರಮಟ್ಟದ ಕೀರ್ತಿ ತಂದುಕೊಟ್ಟ ಧೀಮಂತ. ಅವರ ಸಾಧನೆ ಅವಿಸ್ಮರಣೀಯ ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಬಣ್ಣಿಸಿದರು.

ಬಸವ ಕಾಲನಿಯಲ್ಲಿ ಪ್ರತಿಷ್ಠಾಪಿಸಲಾದ ಡಾ.ಸ.ಜ.ನಾಗಲೋಟಿಮಠ ಅವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ತೀವ್ರ ಬಡತನ ಕುಟುಂಬದಿಂದ ಬಂದಿದ್ದರೂ ಅವಿರತ ಪ್ರಯತ್ನ ಪಟ್ಟು ವೈದ್ಯಕಿಯ ೇತ್ರದಲ್ಲಿ ಅನನ್ಯ ಸಾಧನೆ ಮಾಡಿ ಯುವ ಜನಾಂಗಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಗೌರವಿಸಲಾಯಿತು.

ಮಹಾಪೌರ ಮಂಗೇಶ ಪವಾರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಅನಿಲ ಬೆನಕೆ, ಮಾಜಿ ಮೇಯರ್​ ಬಸಪ್ಪ ಚಿಕ್ಕಲದಿನ್ನಿ, ವಿಎಚ್​ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ ಕದಂ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, ಮಹಾಂತೇಶ ವಕ್ಕುಂದ, ಶಾಂತಾ ನಾಗಲೋಟಿಮಠ, ಸುನೀತಾ ನಾಗಲೋಟಿಮಠ, ಇಂಪನಾ ನಾಗಲೋಟಿಮಠ ಇತರರಿದ್ದರು.

ಬಸವ ಕಾಲನಿ ರಹವಾಸಿಗಳ ಸಂದ ಅಧ್ಯಕ್ಷ ಕೆ.ಐ. ಗಾಣಿಗೇರ ಸ್ವಾಗತಿಸಿದರು. ಬಸವರಾಜ ಹಳಿಂಗಳಿ ನಿರೂಪಿಸಿದರು. ಉಮಾ ಕರಜಗಿಮಠ ವಂದಿಸಿದರು.