ಮುಧೋಳ ನಗರದ ಎಂ.ಕೆ.ಬಿ.ಎಸ್. ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಲಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಮಹಿಳೆಯರು ಸಚಿವ ಕೃಷ್ಣಭೈರೇಗೌಡರ ಎದುರು ಅಳಲು ತೋಡಿಕೊಳ್ಳುತ್ತಿರುವುದು.  
ಜಿಲ್ಲೆ

ಸಚಿವರಿಗೆ ಪ್ರವಾಹ ವಾಸ್ತವ ದರ್ಶನ..!!

ಬಾಗಲಕೋಟೆ: ಜಿಲ್ಲೆಯ ಘಟಪ್ರಭಾ, ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾಗಿರುವ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಹಾಗೂ ಜಿಲ್ಲಾ ಸಚಿವ ಆರ್.ಬಿ.ತಿಮ್ಮಾಪುರ ಭೇಟಿ ನೀಡಿ ವೀಕ್ಷಣೆ ಮಾಡಿದರು. ಜಲ ದಿಗ್ಭಂಧನದಿಂದ ಸಚಿವರು ಅನ್ಯ ಮಾರ್ಗಗಳ ಮಾಲಕ ಸುತ್ತವರೆದು ಪ್ರವಾಹ ಪೀಡಿತಗಳಿಗೆ ತಲುವಂತಾಯಿತು. ಪ್ರವಾಹದ ವಾಸ್ತವ ದರ್ಶನ ಆಯಿತು..!!

ಮಂಗಳವಾರ ಮುಧೋಳ ತಾಲೂಕಿನ ಯಾದವಾಡ ಬ್ರೀಡ್ಜ, ಮಳಲಿ ಗ್ರಾಮಗಳಿಗೆ ಸಚಿವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂತ್ತಸ್ತರು ತಮ್ಮ ನೋವುಗಳನ್ನು ಹಂಚಿಕೊಂಡರು. ಯಾದವಾಡ ಬ್ರೀಡ್ಜ ನಿರ್ಮಾಣವಾಗಿ ೬೦ ವರ್ಷಗಳೆದಿವೆ. ಪ್ರತಿ ವರ್ಷವು ನದಿ ಉಕ್ಕಿ ಹರಿದಾಗ ಮುಳಗಡೆಯಾಗುತ್ತದೆ. ಬೆಳಗಾವಿ, ಗೋಕಾಕ, ಯಾದವಾಡ ಸೇರಿದಂತೆ ಮುಧೋಳ ತಾಲೂಕಿನ ವಿವಿಧ ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಕಷ್ಟವಾಗಲಿದೆ ಎಂದು ರೈತರು ಸಚಿವರಿಗೆ ಮನವರಿಕೆ ಮಾಡಿದರು.
ಇನ್ನು ಮಳಲಿ ಗ್ರಾಮಸ್ಥರು ಪ್ರಹಾರ ಆಗುತ್ತಿರುವ ಅನಾವುತಗಳ ಬಗ್ಗೆ ಮಕ್ಕಳ ಶಿಕ್ಷಣ, ಬೆಳೆ ಹಾನಿ ಬಗ್ಗೆ ಸಚಿವರ ಗಮನಕ್ಕೆ ತಂದರು. ತಮಗೆ ಭರವಸೆ ನೀಡುವುದರಿಂದ ಪರಿಹಾರ ಸಿಗುವದಿಲ್ಲ. ಈ ಸಮಸ್ಯೆಗಳಿಗೆ ಅಂತಿಮ ಸ್ವರೂಪ ನೀಡಬೇಕು. ಇಲ್ಲವಾದಲ್ಲಿ ಗುಳೇ ಹೋಗುವುದು ಅನಿವಾರ್ಯವಾಗಲಿದೆ ಎಂದು ಕಣ್ಣೀರು ಹಾಕಿದರು.

ಅಸಹಾಯಕರಾದ್ರ ಸರ್ಕಾರದ ಸಚಿವರು….?
ಇನ್ನು ಮುಧೋಳ ನಗರದ ಎಂ.ಕೆ.ಬಿ.ಎಸ್. ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಲಾದ ಕಾಳಜಿ ಕೇಂದ್ರಕ್ಕೆ ಸಚಿವರು ಭೇಟಿ ನೀಡಿ ಸಂತ್ತಸ್ತರ ಸಮಸ್ಯೆ ಆಲಿಸಿದರು. ಈ ವೇಳೆ ಪರಿಹಾರ ಕೊಡಿ ಎಂದ ಪ್ರವಾಹ ಸಂತ್ರಸ್ತರಿಗೆ ಸಚಿವರು ಮಾತ್ರ ಭಿಕ್ಷೆ ಬೇಡಿ ದುಡ್ಡು ತರುತ್ತೇನೆ ಅಂತ ಹೇಳುವ ಮೂಲಕ ಸಂತ್ರಸ್ತರೇ ಗಲಿಬಿಲಿಗೊಳ್ಳುವಂತಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸರ್ಕಾರದಿಂದ ದುಡ್ಡು ತರುತ್ತೇನೆ, ಸಮಸ್ಯೆ ಬಗೆಹರಿಸುತ್ತೇನೆ. ಅನ್ನೋದು ಬಿಟ್ಟು ಭಿಕ್ಷೆಯ ಮಾತುಗಳು ಮುಧೋಳ ನಗರದ ಕಾಳಜಿ ಕೇಂದ್ರದ ಸಂತ್ರಸ್ತರ ಅಕ್ಷರಶಃ ಗಾಬರಿಯಾದರು. ಘಟಪ್ರಭಾ ನದಿ ವಕ್ರದೃಷ್ಟಿಗೆ ಸಿಕ್ಕು ಪ್ರತಿ ವರ್ಷ ಸಂಕಷ್ಟ ಎದುರಿಸುತ್ತಿರೋ ಜನರು ಸಾಕಷ್ಟು ಭರವಸೆ ಇಟ್ಟುಕೊಂಡಿದ್ದರು. ಕಂದಾಯ ಸಚಿವರ ಎದುರು ತಮ್ಮ ಸಂಕಷ್ಟ ತೋಡಿಕೊಂಡರು. ಪ್ರತಿ ವರ್ಷ ಪ್ರವಾಹದಿಂದ ಜೀವನ ಕಷ್ಟವಾಗಿದೆ. ಹಿಂದೆ ಇದೇ ಪ್ರವಾಹ ಬಂದು ಹುಳ ಮುಟ್ಟಿ ಗಂಡ ಸತ್ತಿz್ದÁನೆ. ನಮಗೆ ಶಾಶ್ವತ ಪರಿಹಾರ ಬೇಕು. ನಮಗೆ ಸ್ಥಳಾಂತರ ಮಾಡಿ ಬೇರೆ ಕಡೆ ಜಾಗ ಕೊಡಿ ಎಂದು ಅಳಲು ತೋಡಿಕೊಂಡರು.

ಪ್ರತಿ ಬಾರಿ ನೀರು ಬಂದಾಗ ನಮ್ಮ ಬದುಕು ಬಿದಿಗೆ ಬರುತ್ತೆ. ಮಕ್ಕಳು ಮರಿ ಕಟ್ಟಿಕೊಂಡು ಊರು ಬಿಡ್ತೀವಿ, ಮತ್ತೆ ಮುಂದಿನ ವರ್ಷ ಅದೇ ಪರಿಸ್ಥಿತಿ ಎಂದು ಸಚಿವ ಕೃಷ್ಣ ಬೈರೇಗೌಡಗೆ ಮನವಿ ಕೊಟ್ಟು ಮಹಿಳೆಯರು ಕಣ್ಣೀರಿಟ್ಟರು. ಜಾಗ ವಿಚಾರಕ್ಕೆ ನಮ್ಮ ಸಾಹೇಬರು ಮಾತಾನಾಡುತ್ತಾರೆ. ಜಾಗದ ಸಮಸ್ಯೆ ಹಾಗೂ ಸ್ವಲ್ಪ ದುಡ್ಡಿನ ಸಮಸ್ಯೆ ಇದೆ. ಈ ವೇಳೆ ನೀವು ಸ್ವಲ್ಪ ಹೆಚ್ಚಿಗೆ ಕೊಡಿ ಅದಕ್ಕೆ ದುಡ್ಡು ಕಡಿಮೆ ಆದ್ರೆ ನಾನು ಭಿಕ್ಷೆ ಬೇಡಿಯಾದ್ರು ಎಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳುತ್ತಿದ್ದಂತೆ ಕಂದಾಯ ಸಚಿವ ಸಚಿವ ಕೃಷ್ಣ ಬೈರೇಗೌಡ ಮೂಗ್ನಗೆ ನಕ್ಕರು.

ವಿಪಕ್ಷದಲ್ಲಿ ಪುಂಕಾನುಪುಂಕವಾಗಿ ಭಾಷಣ ಮಾಡಿದ್ದ ಸಚಿವರು ಭಿಕ್ಷೆ ಮಾತು ಬಿಟ್ಟು ಸರ್ಕಾರದಿಂದ ದುಡ್ಡು ತರುವ ಶಕ್ತಿ ಪ್ರದರ್ಶಿಸಲಿ ಎನ್ನೋದು ಸಂತ್ರಸ್ತರ ಆಶಯವಾಗಿದೆ. ಕಣ್ಣೀರು ಹಾಕ್ತಿರೋ ಸಂತ್ರಸ್ತರ ಎದುರು ಭಿಕ್ಷೆ ಬೇಡ್ತೇನೆ ಎಂದು ಭಾವನಾತ್ಮಕ ಆಟಕ್ಕೆ ಸಚಿವ ತಿಮ್ಮಾಪುರ ಮುಂದಾದಾರಾ? ಎನ್ನುವ ಮಾತುಗಳು ಕೇಳಿ ಬಂದವು.