ಜಿಲ್ಲೆ

ಸಚಿವರ ೇರಾವ್‌ಗೆ ಕೃಷಿಕರ ನಿರ್ಧಾರ

ಚಿತ್ರದುರ್ಗ: ಅಕ್ರಮ-ಸಕ್ರಮ ಯೋಜನೆಯಡಿ ಕೃಷಿ ಪಂಪ್ ಸೆಟ್‌ಗಳಿಗೆ ಮೂಲ ಸೌಕರ್ಯ ಕಲ್ಪಿಸದೆ ನಿರ್ಲಕ್ಷೃ ಧೋರಣೆ ಪ್ರದರ್ಶಿಸುತ್ತಿರುವ ಬೆ ಸ್ಕಾಂ ನಡೆ ಖಂಡಿಸಿ,ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿ ೇರಾವ್ ಹಾಕಲು ರಾಜ್ಯರೈತ ಸಂಘ-ಹಸಿರು ಸೇನೆ ಜಿಲ್ಲಾ ಜಿಲ್ಲಾ ಸಮಿತಿ ಸಭೆ ನಿರ್ಣಯಿಸಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾತನಾಡಿದ ಪ್ರಮುಖರು,ಒಂದು ವರ್ಷವಾದರೂ ಅಕ್ರಮ-ಸಕ್ರಮದಡಿ ಪಂಪ್‌ಸೆ ಟ್‌ಗಳಿಗೆ ಮೂಲ ಸೌಕರ್ಯ ಒದಗಿಸಲು ಬೆಸ್ಕಾಂ ಇಲಾಖೆಯವರು ಮೀನಾ ಮೇಷ ಎಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ರು. ಮೂರು ಕೃಷಿ ಕಾನೂನುಗಳನ್ನು ಹಿಂಪಡೆದು ಬೆಳೆಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯರೈತ ಸಂಘದ ಕಾರ‌್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ,ರಾಮರೆಡ್ಡಿ,ಬಸವರಾಜಪ್ಪ,ಸತೀಶ್,ಮಂಜುನಾಥ್,ಸದಾಶಿವಪ್ಪ,ಮಾರುತಿ ಸದಾಶಿವ,ರಘು,ತುಂಗಪ್ಪ, ಮಲ್ಲಿಕಾರ್ಜುನ್,ಗಂಗಮ್ಮ,ಚಂದ್ರಮೌಳಿ,ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ಮತ್ತಿತರರು ಇದ್ದರು.