ಚಿತ್ರದುರ್ಗ: ಮಹರ್ಷಿ ವಾಲ್ಮೀಕಿ ಎಸ್ಟಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆಗೆ ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ನಾಯಕರು ಪಟ್ಟು ಹಿಡಿದಿರುವುದು ಎಷ್ಟು ಸರಿ ಎಂದು ದ್ರಾಕ್ಷಿ ಮತ್ತು ವೈನ್ಸ್ ಮಂಡಳಿ ಅಧ್ಯಕ್ಷ ಬಿ.ಯೋಗೇಶ್‌ಬಾಬು ಪ್ರಶ್ನಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇಲಾಧಿಕಾರಿಗಳ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಎಲ್ಲಿಯೂ ಸಚಿವರ ಹೆಸರನ್ನು ನಮೂದಿಸಿಲ್ಲವೆಂದು ಅಧಿಕಾರಿ ಪತ್ನಿಯೇ ಹೇಳಿದ್ದರೂ ಸಿಎಂ ನಿವಾಸದ ಮುಂದೆ ನಡೆಸುತ್ತಿರುವ ಪ್ರತಿಭಟನೆಗೆ ಅರ್ಥವಿಲ್ಲ ಎಂದರು.
ಜೀವ ಕಳೆದುಕೊಂಡ ಅಧಿಕಾರಿಯ ಕುಟುಂಬದ ಜೊತೆ ಸರ್ಕಾರವಿದೆ. ಮೂವರು ಅಧಿಕಾರಿಗಳ ವಿರುದ್ಧ
ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಆನಂತರ ಸತ್ಯ ಹೊರಬರಲಿದೆ. ಅಲ್ಲಿಯವರೆಗೂ ಕಾಯಬೇಕಿದೆ ಎಂದು ಹೇಳಿದರು.
ಮುಖಂಡರಾದ ಜಿ.ಬಿ.ಬಾಲಕೃಷ್ಣಸ್ವಾಮಿ, ಬಸವರಾಜ್, ಮಂಜುನಾಥ್, ಜಯಣ್ಣ, ಜಿ.ವಿ.ಮಧುಗೌಡ, ಶಶಾಂಕ್ ಇತರರಿದ್ದರು.