ಜಿಲ್ಲೆ

ಸಚಿವರ ಮೌಲ್ಯಮಾಪನ ನಡೆಸಿ ; ಮಂತ್ರಿಯಾಗಲು ಹಿರಿತನ ಮಾನದಂಡವಲ್ಲ ಎಂದ ರಾಯರಡ್ಡಿ

ಬಾಬುರಾವ ಯಡ್ರಾಮಿ


ಹಿರಿಯರೆ ಮಂತ್ರಿಯಾಗಬೇಕು ಎಂಬ ನಿಯಮವಿಲ್ಲ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪ್ರಜಾಪ್ರಭುತ್ವದಲ್ಲಿ  ವ್ಯವಸ್ಥೆಯಲ್ಲಿ ಹಿರಿಯ ಶಾಸಕರೇ ಸಚಿವರಾಗಬೇಕು ಎಂಬ ನಿಯಮವಿಲ್ಲ. ಹೊಸದಾಗಿ ಆಯ್ಕೆಯಾದವರು ಆಗಬಹುದು. ಕಿರಿಯರು ಸಚಿವರಾಗಿರುವುದಕ್ಕೆ ನನ್ನದೇನು ತರಕಾರು-ಟೀಕೆ  ಇಲ್ಲ. ಆದರೆ,ಅನುಭವವಿದ್ದರೂ ಮಂತ್ರಿಯಾದರೆ ಒಳ್ಳೆಯ ಆಡಳಿತ ನೀಡಬಹುದು ಎಂಬುದು ನನ್ನ ವಯಕ್ತಿಕ ಅಭಿಪ್ರಾಯ ಎಂದು  ಮಾಜಿ ಸಚಿವರಾದ ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ನಗರಕ್ಕೆ ಕೆಲಸದ ನಿಮಿತ್ತ ಆಗಮಿಸಿದ್ದ ಅವರು ಭೇಟಿಯಾದ ಪತ್ರಕರ್ತರ ಜತೆ ಮಾತನಾಡಿ, ರಾಜಕೀಯ ಮೇಲಾಟದಲ್ಲಿ ಅರ್ಹತೆಗಿಂತ ಅದೃಷ್ಟವೇ ಮೇಲು ಎಂಬುದು ಅನುಭವದಿಂದ ಕಂಡುಕೊAಡಿz್ದೆÃವೆ. ಸಚಿವರಾಗಲು, ಸಿಎಂ ಆಗಲು ಹಿರಿತನ ಎಂಬ ಮಾನದಂಡವೇನು ಇಲ್ಲ. ಮಂತ್ರಿಯಾಗಲು ಹಣೆಬರಹ, ಅದೃಷ್ಟ ಚೆನ್ನಾಗಿಸಬೇಕು. ಆಗ ಮಾತ್ರ ಎಲ್ಲವೂ ಆಗುತ್ತದೆ ಎಂದರು.
 ಬಿಜೆಪಿ ಪP್ಷÀವನ್ನು ಎಲï. ಕೆ.ಆಡ್ವಾನಿ ಕಟ್ಟಿದರು. ಆದರೆ,ನರೇಂದ್ರ ಮೋದಿ ಪ್ರಧಾನಿಯಾದರು. ಸಿದ್ದರಾಮಯ್ಯ ಅವರಿಗೆ ಅರ್ಹತೆ ಜತೆಗೆ ಅದೃಷ್ಟ ಚೆನ್ನಾಗಿದ್ದರಿಂದ ಹೊರಗಿನಿಂದ ಬಂದವರಾದರೂ ಎರಡು ಸಲ ಸಿಎಂ ಆದರು.  ನಾನು ಎಸ್.ಆರ್.ಬೊಮ್ಮಾಯಿ, ಎಚ್. ಡಿ. ದೇವೇಗೌಡ ಸಂಪುಟದಲ್ಲಿ  ಸಚಿವನಾಗಿ ಕೆಲಸ ಮಾಡಿz್ದÉÃನೆ. ಬೊಮ್ಮಾಯಿ ಪುತ್ರ ಬಸವರಾಜ ಬೊಮ್ಮಾಯಿ ಹಾಗೂ ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ  ಸಿಎಂ ಆದರು. ಇದು ಅದೃಷ್ಟ  ಎಂದು ರಾಯರೆಡ್ಡಿ ಮಾರ್ಮಿಕವಾಗಿ ನುಡಿದರು. ಅನುಭವವಿದ್ದವರು ಮಂತ್ರಿಯಾದರೆ ಒಳ್ಳೆಯದು, ಉತ್ತಮ ಆಡಳಿತ ನೀಡಬಹುದು ಎಂದು ತಿಳಿಸಿದರು.
ಸಂಪುಟದಲ್ಲಿರುವ ಸಚಿವರ ಕಾರ್ಯವೈಖರಿ, ಅಭಿವೃದ್ಧಿ ಕೆಲಸಗಳ ಕುರಿತು ವರ್ಷಕೊಮ್ಮೆ ಮೌಲ್ಯಮಾಪನ  ಮಾಡುವ ಕೆಲಸ ಮಾಡಬೇಕು. ಆಗ ಅವರು ಎಷ್ಟು ಕೆಲಸ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಈ ನಿಟ್ಟಿನಲ್ಲಿ ವರಿಷ್ಠರು ಹೆಜ್ಜೆ ಇಟ್ಟರೆ, ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ. ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ವರ್ಷಕ್ಕೊಮ್ಮೆ ಸೇವಾ ಮೌಲ್ಯ ಮಾಪನ ಮಾಡಲಾಗುತ್ತದೆ. ಹಾಗೆ ಸಚಿವರ ಮೌಲ್ಯಮಾಪನ ಮಾಡಿದರೆ ತಪ್ಪೇನಿಲ್ಲ ಎಂದರು. ಬಳಿಕ ಶಾಸಕರು ಕೆಕೆಆರ್‌ಡಿಬಿ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು