ಜಿಲ್ಲೆ

ಸಚಿವರ ಮುಂದೆ ಕಣ್ಣೀರಿಟ್ಟ ಮಹಿಳೆ

ಹಾಸನ: ಪತಿ ಸಾವಿನ ಬಳಿಕ ಅನುಕಂಪದ ನೌಕರಿ ಪಡೆದ ಮಗನಿಂದ ಅನ್ಯಾಯವಾಗಿದೆ ಎಂದು ಜನ ಸಂಪರ್ಕ ಸಭೆಯಲ್ಲಿ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರ ಮುಂದೆ ತಾಯಿ ಕಣ್ಣೀರಿಟ್ಟರು.

ಕಂದಾಯ ಇಲಾಖೆ ನೌಕರರಾಗಿದ್ದ ಪತಿ ಹನುಮೇಗೌಡರ ಸಾವಿನ ಬಳಿಕ ತಂದೆ ಕೆಲಸ ಪಡೆದಿರುವ ಪುತ್ರ ಕುಮಾರಸ್ವಾಮಿ ಅನ್ಯಾಯ ಎಸಗಿದ್ದಾರೆ ಎಂದು ಸಚಿವರ ಎದುರು ತಾಯಿ ಪದ್ಮಮ್ಮ ದೂರಿದರು.

ಕಂದಾಯ ಇಲಾಖೆ ಸೇರಿದ ಬಳಿಕ ಪ್ರಭಾವ ಬಳಸಿ ಆಸ್ತಿ, ಮನೆ ಎಲ್ಲವನ್ನೂ ತನ್ನ ಹೆಸರಿಗೆ ಮಾಡಿಸಿಕೊಂಡು ನನ್ನನ್ನು ಹೊರ ಹಾಕಿದ್ದಾರೆ ಎಂದು ಪದ್ಮಮ್ಮ ಆರೋಪಿಸಿ ಸಚಿವರ ಎದುರು ಕಣ್ಣೀರಿಡುತ್ತ ಕೂಗಾಡಿದರು. ಮನೆಯಿಲ್ಲದೆ ಪಿಜಿಯಲ್ಲಿ ಇರುವುದಾಗಿ ಹೇಳಿದರು.

ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿ ಸಂಬಂಧಪಟ್ಟ ಅಧಿಕಾರಿ ಬಗೆಹರಿಸುವಂತೆ ಸೂಚಿಸಿದರು. ಪುತ್ರಿ ಗೀತಾ ಇದ್ದರು.