ಜಿಲ್ಲೆ

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಶೆ

ನೂತನ ಸರ್ಕಾರದ ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ಹೊರತು ಮೈಸೂರು ಜಿಲ್ಲೆಯ ಬೇರೆ ಶಾಸಕರಿಗೆ ಅವಕಾಶ ದೊರೆತಿಲ್ಲ.

ಸಿಎಂ, ಡಿಸಿಎಂ ಸೇರಿದಂತೆ 10 ಶಾಸಕರು ಸಚಿವರಾಗಿದ್ದಾರೆ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಗೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆ ಇದೆ.

ಶಾಸಕರಾದ ಡಾ.ಎಚ್.ಸಿ.ಮಹದೇವಪ್ಪ(ತಿ.ನರಸೀಪುರ), ತನ್ವೀರ್ ಸೇಠ್(ನರಸಿಂಹರಾಜ), ಕೆ.ವೆಂಕಟೇಶ್(ಪಿರಿಯಾಪಟ್ಟಣ) ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಮೊದಲ ಬಾರಿಗೆ ಆಯ್ಕೆಯಾಗಿರುವ ಡಿ.ರವಿಶಂಕರ್(ಕೆಆರ್ ನಗರ), ದರ್ಶನ್ ಧ್ರುವನಾರಾಯಣ(ನಂಜನಗೂಡು), ಕೆ.ಹರೀಶ್‌ಗೌಡ(ಚಾಮರಾಜ) ಅವಕಾಶ ಸಿಗುವ ಸಾಧ್ಯತೆ ಇಲ್ಲ.