ಕಂಪ್ಲಿ: ಹೈಕಮಾಂಡ್ ಸಚಿವ ಸ್ಥಾನ ನೀಡಿದಲ್ಲಿ ನಿಭಾಯಿಸುವುದಾಗಿ ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಸಿಎಂ ವಿಶೇಷ ಅನುದಾನ ಯೋಜನೆಯಡಿ ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ನಂ.10 ಮುದ್ದಾಪುರ ಕ್ರಾಸ್ ತನಕ ನಾಲ್ಕು ಕೋಟಿ ರೂ. 80 ಲಕ್ಷ ರೂ. ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ರಸ್ತೆ ಹಾಗೂ ರಾಮಸಾಗರದಲ್ಲಿ 50 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಪುರಸಭಾಧ್ಯಕ್ಷ ಭಟ್ಟ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪ್ರಮುಖರಾದ ಎನ್.ಹಬೀಬ್ ರೆಹಮಾನ್, ಕೆ.ಎಸ್.ಚಾಂದ್ ಬಾಷ, ಸಿ.ಆರ್.ಹನುಮಂತ, ಬಿ.ಸಿದ್ದಪ್ಪ, ರಿಯಾಜ್ ಅಹಮದ್, ವಿ.ಮಹಮ್ಮದ್ ಗೌಸ್, ಕೆ.ಮಸ್ತಾನ್, ಕರಿಬಸವನಗೌಡ, ಕೆ.ಕೃಷ್ಣ, ಎಂ.ಗಾಳಿಕುಮಾರ್, ಕಟ್ಟೆ ಬಸವರಾಜ, ಡೆಕೋರೇಟರ್ ನಾಗರಾಜ ಇತರರಿದ್ದರು.