ಚಿತ್ರದುರ್ಗ: ಚೆಕ್‌ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು,ನೈತಿಕ ಹೊಣೆ ಹೊತ್ತು, ತಮ್ಮ ಸ್ಥಾನಕ್ಕೆ ರಾ ಜೀನಾಮೆ ನೀಡ ಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿಪರಿಷತ್ ಕಾರ‌್ಯಕರ್ತರು ಮಂಗಳವಾರ ಡಿಸಿ ಕಚೇರಿ ಬಳಿ ಪ್ರತಿಭ ಟನೆ ನಡೆಸಿದರು.
ಈ ಪ್ರಕರಣದಲ್ಲಿ ಮಧುಬಂಗಾರಪ್ಪ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಶಿಕ್ಷೆ ವಿಧಿಸಿದ್ದರೂ, ಅವರು ಅಧಿಕಾರದಲ್ಲಿ ಮುಂದು ವರಿದಿರುವುದು ವಿಷಾದನೀಯ. ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾರ‌್ಯಕರ್ತರು ಆಗ್ರಹಿಸಿದರು. ಖಾಸಗಿ ಆಡಿಯೊ ಕಂಪನಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಧುಬಂಗಾರಪ್ಪ ಅವರು ಕೊಟ್ಟಿದ್ದ 6.6 ಕೋಟಿ ರೂ. ಮೊತ್ತದ ಚೆಕ್ ಬೌನ್ಸ್ ಆಗಿ ದ್ದರ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರಿಗೆ 6.96 ಕೋಟಿ ರೂ ದಂಡ ವಿಧಿಸಿದೆ. ಒಂದು ವೇಳೆ ದಂಡ ಪಾವತಿಸದಿದ್ದರೆ 6 ತಿಂಗಳ ಸೆರೆ ವಾಸಕ್ಕೆ ಆದೇಶಿಸಿದೆ.
ಈ ರೀತಿ ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ ಸಚಿವರಾಗಿ ಮುಂದುವರಿದಿರುವುದು ಶಿಕ್ಷಣಇಲಾಖೆಗೆ ಕಪ್ಪುಚುಕ್ಕೆಯಾಗಿದ್ದು, ಸಿಎಂ ಸಿದ್ದರಾಮ ಯ್ಯ ಅವರು ಸಚಿವ ಮಧುಬಂಗಾರಪ್ಪ ಅವರ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮ ನವಿ ಸಲ್ಲಿಸಿದರು.
ಪರಿಷತ್ ರಾಜ್ಯಕಾರ್ಯದರ್ಶಿ ಎಚ್.ಕೆ.ಪ್ರವೀಣ್,ರಾಜ್ಯಸಂಚಾಲಕ ಸಿದ್ದೇಶ್‌ಯಾದವ್,ಚಿತ್ರಸ್ವಾಮಿ,ಮನೋಜ್,ರಾಘವೇಂದ್ರ,ಆ ಕಾಶ್,ಸಿಂಚನಾ,ಲಾವಣ್ಯ ಮತ್ತಿತರರು ಇದ್ದರು.