ಬಾಗಲಕೋಟೆ: ಸಚಿವ ತಿಮ್ಮಾಪುರ ತೇಜೋವಧೆ ಖಂಡಿಸಿ ಹಾಗೂ ರಾಜ್ಯ ಲಿಕ್ಕರ್ ಅಸೋಸಿಯೇಷನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಸಚಿವ ಆರ್.ಬಿ.ತಿಮ್ಮಾಪುರ ಅಭಿಮಾನಿ ಬಳಗದಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು.
ನಗರಸಭೆ ಮುಂಭಾಗದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ಬ್ಯಾಂಕ್, ಎಸ್ಪಿ ಕಚೇರಿ, ಅಗ್ನಿ ಶಾಮನ ದಳ, ಬಸ್ ನಿಲ್ದಾಣ ರಸ್ತೆ ಮೂಲಕ ಹಾಯ್ದು ಜಿಲ್ಲಾಡಳಿತ ಭವನ ಮುಖ್ಯದ್ವಾರ ತಲುಪಿತು. ಟೈಯರಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಅಭಿಮಾನಿ ಬಳಗದವರು ಮದ್ಯ ಮಾರಾಟಗಾರರ ಸಂಘದ ರಾಜ್ಯಾಧ್ಯಕ್ಷ, ಪದಾಽಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖ ಲಿಸಬೇಕು ಎಂದು ಅಪರ ಜಿಲ್ಲಾಽಕಾರಿ ಪಶುರಾಮ ಶಿನ್ಯಾಳಕರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಅಭಿಮಾನಿ ಬಳಗದ ಅಧ್ಯಕ್ಷ ಶಿವಾನಂದ ಉದಪುಡಿ ಮಾತನಾಡಿ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತ್ತಿದೆ. ಅಕ್ರಮ ಮದ್ಯಕೋರರ ಮೇಲೆ ಕ್ರಮಕ್ಕೆ ಆರ್.ಬಿ.ತಿಮ್ಮಾಪುರ ಮುಂದಾಗಿದ್ದಾರೆ. ಲಿಕ್ಕರ ಮಾಫಿಯಾ ತಡೆಗಟ್ಟಲು ಸಚಿವ ಆರ್.ಬಿ .ತಿಮ್ಮಾಪುರ ಶ್ರಮಿಸುತ್ತಿದ್ದಾರೆ. ಇದರಿಂದ ನೊಂದುಕೊಂಡು ಕೆಲವರು ಆರ್.ಬಿ.ತಿಮ್ಮಾಪುರ ವಿರುದ್ಧ ಷಡ್ಯಂತ ರೂಪಿಸುತ್ತಿದ್ದಾರೆ. ಇದಕ್ಕೆ ಜಗುವದಿಲ್ಲ. ಬಗ್ಗುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿರಪ್ಪ ಮ್ಯಾಗೇರಿ ಮಾತನಾಡಿ, ಸಚಿವ ಆರ್.ಬಿ.ತಿಮ್ಮಾಪುರ ವರ್ಗಾವಣೆ ದಂಧೆ ಮಾಡಿಲ್ಲ. ಒಬ್ಬ ಅಽಕಾರಿಯನ್ನು ಎತ್ತಂಗಡಿ ಮಾಡಿಲ್ಲ. ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಚಿಂತನೆ ನಡೆಸಿದ್ದಾರೆ. ಇದನ್ನು ತಿರುಚಿ ಬಿಜೆಪಿಗರು ಹಾಗೂ ಲಿಕ್ಕರ ಅಸೋಸಿಯೇಷನ್ ಕೆಲವು ಪದಾಽಕಾರಿಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಚುನಾವಣೆಗೆ ಏಳ ನೂರು ಕೋಟಿ ರೂ. ಬಳಕೆಯಾಗುತ್ತಿದೆ ಅಂತ ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡುತ್ತಿರುವುದು ನಾಚಿಕೆ ಗೇಡಿನ ಸಂಗತಿ ಎಂದು ಕಿಡಿಕಾರಿದರು.
ಮುಖ್ಯವಾಗಿ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ತಿಂದು ತೇಗಿದ ಬಿಜೆಪಿ ನಾಯಕರ ಬಗ್ಗೆ ತುಟಿಕ್, ಪಿಟಿಕ್ ಎನ್ನುವ ಮೋದಿ ಇಂದು ದಲಿತ ನಾಯಕರ ಬಗ್ಗೆ ಮಾತ ನಾಡುತ್ತಿರುವುದು ಅವಮಾನಕರ ಸಂಗತಿಯಾಗಿದೆ. ಕೂಡಲೇ ಆರೋಪ ಹಿಂಪಡೆಯಬೇಕು. ಇಲ್ಲ್ಲವೇ ಆರೋಪ ಸಾಬೀತು ಮಾಡಬೇಕು. ಸಿದ್ದರಾಮಯ್ಯ ಅವರು ಹೇಳಿದಂತೆ ರಾಜಕೀಯ ನಿವೃತ್ತಿ ಘೋಷಿಸಬೇಕು ಎಂದು ಸವಾಲು ಹಾಕಿದರು.
ರಕ್ಷಿತಾ ಈಟಿ ಮಾತನಾಡಿ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ, ಜಿಲ್ಲೆಯಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಬದ್ದತೆ ಆಡಳಿತ ನೀಡುತ್ತಿದ್ದಾರೆ. ಐದು ಗ್ಯಾರಂಟಿಗಳನ್ನು ಅನುಷ್ಠಾನ ಗೊಳಿಸಿ ಯಶಸ್ವಿಯಾಗಿದ್ದಾರೆ. ಇದನ್ನು ಸಹಿಸದೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ಟೀಂ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಮುಖಂಡರದ ತೌಸೀಪ್ ಪಾರತನಳ್ಳಿ, ವೈ.ವೈ.ತಿಮ್ಮಾಪುರ, ರಾಜು ಮನ್ನಿಕೇರಿ, ಗೋವಿಂದ ಕವಲಗಿ, ರಾಜು ಮೇಲನಕೇರಿ ಸೇರಿದಂತೆ ಇತರರು ಇದ್ದರು.
=========