ಚಿತ್ರದುರ್ಗ: ಬೀದರ್ ಗುತ್ತಿಗೆದಾರ ಸಚಿನ್‌ಪಾಂಚಾಳ ಆತ್ಮಹತ್ಯೆ ಪ್ರಕರಣ ಖಂಡಿಸಿ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜ.4ರಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಅಂದು ಕಲಬುರಗಿಯಲ್ಲಿ 25 ಸಾವಿರಕ್ಕೂ ಅಧಿಕ ಕಾರ‌್ಯಕರ್ತರೊಂದಿಗೆ ಬೃ ಹತ್ ಪ್ರತಿಭಟನೆ ನಡೆಸಲಾಗುವುದು. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ ಅನೇಕ ಹಗರಣಗಳಾಗಿವೆ. ಮುಖ್ಯಮಂತ್ರಿ ಹಾಗೂ ಹಲವು ಮಂತ್ರಿಗಳ ಹೆಸರು ಹಲವು ಹಗರಣಗಳೊಂದಿಗೆ ತಳಕು ಹಾಕೊಂಡಿದ್ದರೂ, ಏನೂ ಆಗಿಲ್ಲವೆಂದು ಸಿಎಂ ಭಂಡತನ ಮೆರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿನ್ ಬರೆದಿಟ್ಟಿದ್ದ 7 ಪುಟದ ಡೆತ್‌ನೋಟ್‌ನಲ್ಲಿ ಸಚಿವ ಪ್ರಿಯಾಂಕ್‌ಖರ್ಗೆ ಬಲಗೈ ಬಂಟರ ಹೆಸರಿವೆ. ನಮ್ಮ ಶಾಸಕ ಬಸವರಾಜ ಮತ್ತಿಮಡು ಸಹಿತ ನಾಲ್ವರ ಹತ್ಯೆಗೆ ಸಂಚು ನಡೆಸಿ ಸುಫಾರಿ ಕೊಟ್ಟಿರುವ ಮಾಹಿತಿ ಕೂಡ ಇದೆ. ಆತ್ಮಹತ್ಯೆ ಪ್ರಕರಣಗಳು, ಹಗರಣಗಳಿಗೆ ಸಂ ಬಂಧಿಸಿ ಕೆಲವು ಸಚಿವರ ವಿರುದ್ಧ ಆರೋಪಗಳು ಕೇಳಿ ಬಂದಿದ್ದು,ಪಾರದರ್ಶಕ ತನಿಖೆಗಾಗಿ,ತಮ್ಮ ವಿರುದ್ಧ ಆರೋಪ ಕೇಳಿ ಬಂದಿರುವ ಸಚಿವರು ಹಾಗೂ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು.
ಈ ಸರ್ಕಾರ ಸಂವಿಧಾನ ವಿರೋಧಿಯಾಗಿದೆ, ಭ್ರಷ್ಟಾಚಾರ ಹೆಚ್ಚಾಗಿದೆ. ಬಿಜೆಪಿ ಹಗರಣಗಳನ್ನು ಪ್ರಸ್ತಾಸಿದರೆ,ಕಾಂಗ್ರೆಸ್ ದ್ವೇಷ ರಾಜ ಕಾರಣವೆನ್ನುತ್ತಿದೆ. ಪೊಲೀಸರು ಕಾನೂನು ರೀತಿ ಕೆಲಸ ಮಾಡದೆ, ಕಾಂಗ್ರೆಸ್ ನಾಯಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದು, ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸ ಬೇಕೆಂದು ರಾಜ್ಯಸರ್ಕಾರ ವನ್ನು ಒತ್ತಾಯಿಸಿದರು.
ಎಸ್‌ಎಸ್ ಸರ್ಕಾರ !
ಎಂಎಲ್‌ಸಿ ಕೆ.ಎಸ್.ನವೀನ್ ಮಾತನಾಡಿ,ಎಸ್‌ಎಸ್(ಸಿದ್ದರಾಮಯ್ಯ,ಶಿವಕುಮಾರ್)ಎಂದೇ ಕರೆಸಿಕೊಂಡಿದ್ದ ಈ ಸರ್ಕಾರವೀಗ ಸೂಯಿಸೈಡ್-ಸುಫಾರಿ ಹಾಗೂ ಸುಳ್ಳು-ಸಾಲದ ಸರ್ಕಾರವಾಗಿ ಪರಿವರ್ತನೆಯಾಗಿದೆ. ಪ್ರತಿ ಆತ್ಮಹತ್ಯೆ ಪ್ರಕರಣ/ಹಗರಣದಲ್ಲೂ ಒಬ್ಬ ಸಚಿವರ ಹೆಸರು ತಳಕು ಹಾಕಿಕೊಂಡಿದೆ.
ಆರೋಪಿ ಸಚಿವರಿಗೆ ಬೆಂಬಲವಾಗಿ ನಿಂತಿರುವ ಸಿದ್ದರಾಮಯ್ಯ ಸೂಯಿಸೈಡ್ ಗ್ಯಾರಂಟಿ ಕೊಟ್ಟಿದ್ದಾರೆ. ತಮ್ಮ ಕುರ್ಚಿ ಉಳಿಸಿಕೊಳ್ಳ ಲು ಸಿದ್ದರಾಮಯ್ಯ ಪ್ರಿಯಾಂಕ್‌ಖರ್ಗೆ ಅವರಿಗೆ ಕ್ಲೀನ್‌ಚಿಟ್ ಕೊಟ್ಟಿದ್ದಾರೆ. ಸಂವಿಧಾನ,ಕಾನೂನು ಬಗ್ಗೆ ಗೌರವವಿದ್ದರೆ ಸಿದ್ದರಾಮಯ್ಯ ಆ ರೋಪಿ ಸಚಿವರ ರಾಜೀನಾಮೆ ಪಡೆಯಬೇಕು. ಸೂಪರ್ ಸಿಎಂ ಎಂಬಂತೆ ವರ್ತಿಸುತ್ತಿರುವ ಪ್ರಿಯಾಂಕ್‌ಖರ್ಗೆ,ಈಶ್ವರಪ್ಪ ಪ್ರಕರಣದಲ್ಲಿ ಏನೂ ಮಾತನಾಡಿದ್ದರು ಎಂಬುದನ್ನು ನೆನಪಿಸಿಕೊಳ್ಳ ಬೇಕೆಂದರು.
ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ,ನೇರ‌್ಲಗುಂಟೆ,ತಿಪ್ಪೇಸ್ವಾಮಿ,ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ,ಸುರೇಶ್‌ಸಿದ್ದಾಪುರ,ಸಂಪತ್‌ಕು ಮಾರ್,ಮಲ್ಲಿಕಾರ್ಜನ್,ವಿಶ್ವನಾಥ್,ಎನ್.ಆರ್.ಲಕ್ಷ್ಮೀಕಾಂತ್,ಛಲವಾದಿ ತಿಪ್ಪೇಸ್ವಾಮಿ,ನಾಗರಾಜ್‌ಬೇದ್ರೆ ಇದ್ದರು.
---