ಹುಬ್ಬಳ್ಳಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ನಿಮಿತ್ತ ಪ್ರಾದೇಶಿಕ ಸಾರಿಗೆ ಇಲಾಖೆ ಆಶ್ರಯದಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಮಂಗಳವಾರ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ನವಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಲಾಗಿತ್ತು.
ಉಪಸಾರಿಗೆ ಆಯುಕ್ತ ಭೀಮನಗೌಡ ಪಾಟೀಲ ಮಾತನಾಡಿ, ಅಪಘಾತಗಳ್ನು ತಡೆಯಲು ಸಂಚಾರಿ ನಿಯಮ ಪಾಲನೆ ಅತ್ಯಗತ್ಯ. ಪ್ರತಿ ದಿನ 30 ಜನರು ರಸ್ತೆ ಅಪಘಾತದಲ್ಲಿ ಮೃತಪಡುತ್ತಿದ್ದಾರೆ. ಸಂಚಾರ ನಿಯಮ ಪಾಲನೆಯಿಂದ ಅಪಘಾತ ಸಂಭವಿಸುವುದಿಲ್ಲ ಎಂದು ತಿಳಿವಳಿಕೆ ನೀಡಿದರು.
ಹಿರಿಯ ವಾಹನ ನಿರೀಕ್ಷಕ ಪಿ.ಆರ್. ದೇಸಾಯಿ ಮಾತನಾಡಿ, ಚಾಲನಾ ಪರವಾನಗಿ ಪಡೆದು ವಾಹನಗಳನ್ನು ಚಲಾಯಿಸಬೇಕು ಎಂದು ಸಲಹೆ ನೀಡಿದರು. ಕಾನೂನು ವಿಶ್ವವಿದ್ಯಾಲಯದ ಕುಲಸಚಿವೆ ಅನುರಾಧ ವಸ್ತ್ರದ ಉದ್ಘಾಟಿಸಿ ಮಾತನಾಡಿದರು.
ಹಣಕಾಸು ಅಧಿಕಾರಿ ಪ್ರೊ.ಜಿ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಸಂಚಾರ ನಿಯಮ ಪಾಲನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕುಲಸಚಿವೆ ಪ್ರೊ. ರತ್ನಾ ಭರಮಗೌಡರ, ವಾಹನ ನಿರೀಕ್ಷಕ ಎಂ.ಎಫ್. ಬನಹಟ್ಟಿ, ಅಧೀಕ್ಷಕ ಸಚಿನ್ ಹುಲಕೋಟಿ, ಲಕ್ಷ್ಮೀ ಬೂದಣ್ಣವರ, ನಿಂಗಪ್ಪ ಬಿಳ್ಳೂರು ಇತರರು ಇದ್ದರು.