ಜಿಲ್ಲೆ

ಸಂಗೀತ ಸಾಧನೆಗೆ ಗುರು ಮುಖ್ಯ

ಧಾರವಾಡ: ಸಂಗೀತ ಅದರಲ್ಲೂ ವಿಶೇಷವಾಗಿ ಶಾಸ್ತ್ರೀಯ ಸಂಗೀತದಲ್ಲಿ ಶ್ರೇಷ್ಠತೆ ಸಾಧಿಸಲು ಗುರು ಮಾರ್ಗದರ್ಶನ ಅವಶ್ಯ. ಗುರುವಿನಿಂದ ವಿದ್ಯೆ ಪಡೆದು ತನ್ನ ಪರಿಶ್ರಮದಿಂದ ಸತತ ಅಭ್ಯಾಸದ ಮೂಲಕ ತನ್ನದನ್ನಾಗಿ ಮಾಡಿಕೊಳ್ಳಲು ಗುರು ಕರುಣೆ ಮುಖ್ಯ ಎಂದು ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲ ಹೇಳಿದರು.
ನಗರದ ಕೆಲಗೇರಿ ರಸ್ತೆಯ ವೆಂಕಟಾಚಲ ಸಭಾಭವನದಲ್ಲಿ ಮಹಿಪತಿ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಗುರುಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೈಷ್ಣವಿ ಚಿಪ್ಪಲಕಟ್ಟಿ, ಚಂದನಾ ಕಿವಡಣ್ಣವರ, ಶ್ರೀದೇವಿ ಜೋಶಿ, ಅಶೋಕ ನಿಂಗೋಲಿ, ಗೀತಾ ಆಲೂರ ಹಾಗೂ ರಾಧಿಕಾ ಕಾಖಂಡಿಕಿ ಗಾಯನ ಪ್ರಸ್ತುತ ಪಡಿಸಿದರು. ಸಂವಾದಿನಿಯಲ್ಲಿ ವಾಮನ ವಾಗೂಕರ, ತಬಲಾದಲ್ಲಿ ಜಯತೀರ್ಥ ಪಂಚಮುಖಿ ಮತ್ತು ತಾಳದಲ್ಲಿ ಸುಮನ್ಯು ಸಾಥ್ ನೀಡಿದರು.
ಡಾ.ರಮಾಕಾಂತ ಜೋಶಿ, ದುಷ್ಯಂತ ನಾಡಗೌಡ, ಹರ್ಷ ಡಂಬಳ, ಶ್ರೀಕಾಂತ ಮಾಳಾಪುರ, ರಾಘವೇಂದ್ರ ಅಂಬೇಕರ, ದೀಪಕ ಆಲೂರ, ವೆಂಕಟೇಶ ಕೊರ್ತಿ, ವಸಂತ ದೇಸಾಯಿ, ವೆಂಕಟೇಶ ದೇಸಾಯಿ, ಸಮೀರ ಜೋಶಿ, ಶ್ರೀಕಾಂತ ದೇಸಾಯಿ, ಎಸ್.ಎಂ. ದೇಶಪಾಂಡೆ, ರಮೇಶ ಕಾಖಂಡಕಿ, ಹ.ವೆಂ. ಕಾಖಂಡಕಿ, ಇತರರು ಇದ್ದರು.