ಜಿಲ್ಲೆ

ಸಗಟು ತರಕಾರಿ ಖರೀದಿ ತ್ವರಿತ

ಹುಬ್ಬಳ್ಳಿ: ಇಲ್ಲಿಯ ಎಪಿಎಂಸಿ ಪ್ರಾಂಗಣದಲ್ಲಿರುವ ತರಕಾರಿ ಸಗಟು ಮಾರಾಟ ವ್ಯವಸ್ಥೆಯಲ್ಲಿ ಒಂದಿಷ್ಟು ಸುಧಾರಣೆಗಳಾಗಿವೆ.

ನಿತ್ಯ ಬೆಳಗ್ಗೆ 10- 11 ಗಂಟೆವರೆಗೆ ನಡೆಯುತ್ತಿದ್ದ ಮಾರುಕಟ್ಟೆ ವಹಿವಾಟು ಶನಿವಾರ ಬೆಳಗ್ಗೆ 9 ಗಂಟೆ ವೇಳೆಗೆ ಮುಕ್ತಾಯ ಹಂತ ತಲುಪಿತು. ಜನಸಂದಣಿ ಮಾತ್ರ ಎಂದಿನಂತೆ ಇತ್ತು. ಕಮಿಷನ್ ಏಜೆಂಟ್ ಬಳಿ ಹತ್ತಾರು ಜನರು ಪರಸ್ಪರ ಅಂತರ ಇಲ್ಲದೆ ನಿಂತುಕೊಂಡು ವ್ಯವಹಾರ ನಡೆಸುವುದು ನಡೆದೇ ಇದೆ. ಇದರ ಜೊತೆಗೆ ಚಿಲ್ಲರೆ ತರಕಾರಿ ಖರೀದಿಯೂ ಎಗ್ಗಿಲ್ಲದೇ ನಡೆದಿದೆ. ಸಾರ್ವಜನಿಕರು ಸಹ ಬಂದು ತರಕಾರಿ ಕೊಂಡೊಯ್ಯುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬರುತ್ತಿದೆ.

ಪಾಸ್ ಉಳ್ಳವರಿಗೆ ಮಾತ್ರ ಪ್ರವೇಶ ಎಂದು ಎಪಿಎಂಸಿ ಆಡಳಿತ ಮಂಡಳಿ ಹೇಳಿತ್ತಾದರೂ ಅವರ ಸೂಚನೆ ಪಾಲನೆಯಾಗುತ್ತಿಲ್ಲ. ಕೈಚೀಲ ಹಿಡಿದು ತರಕಾರಿ ಸಗಟು ಮಾರುಕಟ್ಟೆಗೆ ಬರುವವರ ಸಂಖ್ಯೆಯೇನೂ ಕಡಿಮೆ ಆಗಿಲ್ಲ. ಒಟ್ಟಾರೆ, ಅವಧಿಗಿಂತ ಮೊದಲೇ ತರಕಾರಿ ವಹಿವಾಟು ಮುಗಿದಿದೆ.

EndFragment