ಜಯತೀರ್ಥ ಪಾಟೀಲ ಕಲಬುರಗಿ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವ್ಯಾಪ್ತಿಯ ರೈಸ್ ಮರ್ಚಂಟ್ಸ್ ಮತ್ತು ಹೋಲ್ಸೇಲ್ ಡೀಲರ್ಸ್ (ಕಿರಾಣ ಇತರ) ವ್ಯಾಪಾರ, ವಹಿವಾಟು ಪ್ರಾರಂಭವಾಗುವ ಮೂಲಕ ದಿನಸಿ ಪದಾರ್ಥ ಪರದಾಟಕ್ಕೆ ಕೊಂಚ ರಿಲೀಫ್ ಸಿಕ್ಕಿದೆ.
ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಹೀಗೆ ವಾರದ ನಾಲ್ಕು ದಿನ ವಹಿವಾಟು ನಡೆಸಲು ತೀಮರ್ಾನಿಸಿದ್ದು, ನಿತ್ಯ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಲೋಡಿಂಗ್, ಅನ್ಲೋಡಿಂಗ್ ಮತ್ತು ವ್ಯಾಪಾರ ವಹಿವಾಟು ನಡೆಸುವಂತೆ ವರ್ತಕರಿಗೆ ಸೂಚಿಸಲಾಗಿದೆ.
ಮಾಕರ್ೆಟ್ ಯಾಡರ್್ನಲ್ಲಿ ರೈಸ್ ಮರ್ಚಂಟ್ಸ್ 48 ಸೇರಿ ಹೋಲ್ಸೇಲ್ 110 ಅಂಗಡಿಗಳಿದ್ದು, ಇವು ಮಾಕರ್ೆಟ್ ಯಾಡರ್್ನಲ್ಲಿ ಮಾತ್ರ ವಹಿವಾಟು ನಡೆಸಲಿವೆ. ವಾರದ ಆರು ದಿನ ವಹಿವಾಟಿಗೆ ಚಿಂತನೆ ನಡೆಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ವಾರದಲ್ಲಿ ನಾಲ್ಕು ದಿನ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಮೂರು ದಿನ ಅನ್ಲೋಡಿಂಗ್: ವ್ಯಾಪಾರ, ವಹಿವಾಟು ಹೊರತುಪಡಿಸಿದ ದಿನಗಳಲ್ಲಿ ಕೇವಲ ಅನ್ಲೋಡಿಂಗ್ ಮಾಡಬಹುದು. ದೂರದ ಊರಿನಿಂದ ಬರುವ ಲಾರಿಗಳು ಅನಗತ್ಯ ಕಾಯದೆ ಮಾರುಕಟ್ಟೆ ಬಂದ್ ಇದ್ದ ದಿನ ಅನ್ಲೋಡಿಂಗ್ ಮಾಡಲು ಅವಕಾಶ ಒದಗಿಸಲಾಗಿದೆ.
ಎಪಿಎಂಸಿ ಮಾರುಕಟ್ಟೆಗೆ ರಾಜ್ಯ ಸರ್ಕಾರ ಸಡಿಲಿಕೆ ಘೋಷಿಸಿದ್ದು, ಜಿಲ್ಲಾಡಳಿತದ ಸೂಚನೆ ಬಂದ ನಂತರ ಗಂಜ್ ವಹಿವಾಟು ಪುನರಾರಂಭಗೊಳ್ಳಲಿದೆ. ಆದರೆ ತೊಗರಿ ಮತ್ತು ಕಡಲೆ ವಹಿವಾಟಿಗೆ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಹಣ್ಣು ಮತ್ತು ತರಕಾರಿ ಮಾರುಕಟ್ಟೆಗೆ ಸಂಬಂಧಿಸಿದಂತೆ ಜೇವರ್ಗಿ ರಸ್ತೆಯ ಅಟಲ್ ಬಿಹಾರಿ ವಾಜಪೇಯಿ ಲೇಔಟ್ ಮತ್ತು ತಾಜಸುಲ್ತಾನಪುರನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ತಾಜಸುಲ್ತಾನಪುರದಲ್ಲಿ ಹೋಲ್ಸೇಲ್ ಇದ್ದರೆ, ವಾಜಪೇಯಿ ಲೇಔಟ್ನಲ್ಲಿ ಹೋಲ್ಸೇಲ್ ಜತೆಗೆ ರಿಟೇಲ್ಗೂ ಅವಕಾಶವಿದೆ.
ದಿನಸಿ ಅಂಗಡಿಗೆ ರಿಲೀಫ್ : ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ ಅಧ್ಯಕ್ಷತೆಯಲ್ಲಿ ನಡೆದ ಸಹಾಯಕ ನಿರ್ದೇಶಕಿ ಶೈಲಜಾ, ಸಿಪಿಐ ಶಕೀಲ್ ಅಂಗಡಿ, ಅಧಿಕಾರಿಗಳಾದ ರಾಜಕುಮಾರ, ಅನಿಲ್ ಹಾದಿಮನಿ, ಪ್ರಕಾಶ ಸೇರಿ ವರ್ತಕರ ಸಭೆಯಲ್ಲಿ ವಾರಕ್ಕೆ ನಾಲ್ಕು ದಿನ ವ್ಯಾಪಾರ ವಹಿವಾಟು ಮೂಲಕ ದಿನಸಿ ಅಂಗಡಿಗಳಿಗೆ ಕೊಂಚ ಉಸಿರಾಡುವಂತೆ ಮಾಡಲಾಗಿದೆ.
ಇದಕ್ಕೂ ಮುನ್ನ ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ ಅವರು ಗಾದಾ, ಮುದ್ದಾ, ಮಾದಮಶೆಟ್ಟಿ, ವೆಂಕಟೇಶ್ವರ ಸೇರಿ ಅನೇಕ ವರ್ತಕರ ಸಭೆ ನಡೆಸಿ ವ್ಯಾಪಾರ, ವಹಿವಾಟು ಕುರಿತು ಸಮಗ್ರ ಚರ್ಚೆ ನಡೆಸಿದರು.
ಹೋಲ್ಸೇಲ್ ವ್ಯಾಪಾರ ಬಂದ್ ಆಗಿದ್ದರಿಂದ ನಗರದ ವಿವಿಧೆಡೆ ಕಿರಾಣ ಅಂಗಡಿಗಳಲ್ಲಿ ದಿನಸಿ ಖಾಲಿಯಾಗಿತ್ತು. ಅಂಗಡಿಗೆ ಹೋದ ಗ್ರಾಹಕರಿಗೆ ಸ್ಟಾಕ್ ಇಲ್ಲ ಎಂಬ ಉತ್ತರ ಸಾಮಾನ್ಯವಾಗಿತ್ತು. ಆದರೀಗ ಎಪಿಎಂಸಿ ನಿರ್ಧಾರದಿಂದ ಸಣ್ಣ ಸಣ್ಣ ಕಿರಾಣ ಅಂಗಡಿಗಳು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
ಹೋಲ್ಸೇಲ್ ವ್ಯಾಪಾರ ವಾರದ ಆರು ದಿನ ನಡೆಸಬೇಕೆಂಬ ಚಿಂತನೆ ಇತ್ತು. ಕೆಲ ಕಾರಣಗಳಿಂದ ನಾಲ್ಕು ದಿನಕ್ಕೆ ಸೀಮಿತಗೊಳಿಸಲಾಗಿದೆ. ಕಿರಾಣ ವ್ಯಾಪಾರಸ್ಥರಿಗೆ ಕೊಂಚ ರಿಲೀಫ್ ಸಿಗಲಿದೆ. ಎಪಿಎಂಸಿ ಮತ್ತು ವಾಜಪೇಯಿ ಲೇಔಟ್ ತರಕಾರಿ ಮಾರುಕಟ್ಟೆಯಲ್ಲಿ ಸ್ಯಾನಿಟೈಸಿಂಗ್ ಮೂಲಕ ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ವಹಿವಾಟು ನಡೆಯುತ್ತಿದೆ.
| ಅಪ್ಪು ಕಣಕಿ
ಅಧ್ಯಕ್ಷ, ಎಪಿಎಂಸಿ ಕಲಬುರಗಿ