ಬಾಗಲಕೋಟೆ: ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ರಾಜಕೀಯ ಪಕ್ಷಗಳು, ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅಪರ ಜಿಲ್ಲಾಽಕಾರಿ ಪರಶುರಾಮ ಶಿನ್ಯಾಳಕರ ಹೇಳಿದರು.
ತಮ್ಮ ಕಚೇರಿಯಲ್ಲಿ ಗುರುವಾರ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-೨೦೨೫ರ ಹಿನ್ನಲೆಯಲ್ಲಿ ಅಪರ ಜಿಲ್ಲಾಽಕಾರಿಗಳ ಕಚೇರಿಯಲ್ಲಿ ಮತಗಟ್ಟೆಯ ತರ್ಕಬದ್ಧಗೊಳಿಸುವ ಕುರಿತು ಜಿಲ್ಲೆಯ ಪ್ರಮುಖ ರಾಜಕೀಯ ಪಕ್ಷಗಳ ಅಧ್ಯಕ್ಷರ, ಮುಖಂಡರ ಜೊತೆ ಸಭೆ ಜರುಗಿತು.
ಸಭೆಯಲ್ಲಿ ಹೆಚ್ಚುವರಿ ಮತಗಟ್ಟೆ ಸ್ಥಾಪಿಸುವುದು, ಮತಗಟ್ಟೆ ವಿಳಾಸ ಬದಲಾವಣೆ ಇದ್ದಲ್ಲಿ ಬದಲಾವಣೆ ಮಾಡುವದು, ಮತಗಟ್ಟೆಗಳನ್ನು ವಿಲೀನಗೊಳಿಸುವುದು, ಮತಗಟ್ಟೆಗಳನ್ನು ಸ್ಥಳಾಂತರ ಮಾಡುವುದು ಹಾಗೂ ಹೆಡ್ಡರ್ ಪೇಜ್‌ಗೆ ಸಂಬಂಽಸಿದ ಬದಲಾವಣೆಗಳಿದ್ದಲ್ಲಿ ನಿಗದಿತ ನಮೂನೆಗಳಲ್ಲಿ ಪ್ರಸ್ತಾವನೆ ತಯಾರಿಸಿ ಸಲ್ಲಿಸಲು ಸಭೆಯಲ್ಲಿ ತಿಳಿಸಲಾಯಿತು.
ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು ೭ ವಿಧಾನಸಭಾ ಮತಕ್ಷೇತ್ರಗಳ ತಹಸೀಲ್ದಾರ, ಉಪವಿಭಾಗಾಽಕಾರಿಗಳು ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-೨೦೨೫ರ ಹಿನ್ನಲೆಯಲ್ಲಿ ಹೊಸದಾಗಿ ಮತಗಟ್ಟೆಗಳನ್ನು ಸ್ಥಾಪಿಸುವುದು, ಮತಗಟ್ಟೆ ವಿಳಾಸ ಬದಲಾವಣೆ ಮಾಡುವುದು ಸೇರಿದಂತೆ ಸ್ಥಳಾಂತರಕ್ಕೆ ಸಂಬಂಽಸಿದಂತೆ ನಿಗದಿತ ನಮೂನೆಗಳಲ್ಲಿ ಜಿಲ್ಲಾಽಕಾರಿಗಳ ಕಚೇರಿಗೆ ಸಲ್ಲಿಸಿದ ಮಾಹಿತಿಯನ್ನು ನೀಡಲಾಯಿತು.
ಸಭೆಯಲ್ಲಿ ಉಪವಿಭಾಗಾಽಕಾರಿ ಸಂತೋಷ ಜಗಲಾಸರ, ತಹಸೀಲ್ದಾರ ಅಮರೇಶ ಪಮ್ಮಾರ, ಚುನಾವಣಾ ಶಿರಸ್ತೆದಾರ ಮಹೇಶ ಪಾಂಡವ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.