ಜಿಲ್ಲೆ

ಸಕ್ಕರೆ ವಿತರಣೆಗೆ ಚಾಲನೆ

ಅಥಣಿ ಗ್ರಾಮೀಣ: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಷೇರುದಾರರು ಮತ್ತು ಕಬ್ಬು ಪೂರೈಕೆದಾರರು ಸೂಕ್ತ ದಾಖಲೆ ತೋರಿಸಿ ಸಕ್ಕರೆ ಪಡೆದುಕೊಳ್ಳಬೇಕು ಎಂದು ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ತಿಳಿಸಿದರು.

ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಹೊರವಲಯದಲ್ಲಿರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಷೇರುದಾರಿಗೆ ಮತ್ತು ಕಬ್ಬು ಪೂರೈಕೆದಾರರಿಗೆ ರಿಯಾಯಿತಿ ದರದಲ್ಲಿ ಶುಕ್ರವಾರ ಸಕ್ಕರೆ ವಿತರಿಸಿ ಮಾತನಾಡಿದರು. ಎಸ್.ಎ. ಠಕ್ಕಣ್ಣನವರ, ಎಸ್.ಡಿ.ವಟಣ್ಣನವರ, ಎಚ್.ಡಿ. ಧರಿಗೌಡ ಇತರರು ಇದ್ದರು.