ಜಿಲ್ಲೆ

ಸಕ್ಕರೆ ಕಾಯಿಲೆಯೆಡೆ ಕಹಿ ಭಾವನೆ ಬೇಡ

ಚಿತ್ರದುರ್ಗ: ಚಿತ್ರದುರ್ಗ ಭಾರತೀಯ ಯೋಗ ಶಿಕ್ಷಣ ಸಂಸ್ಥೆ,ಜಿಪಂ ಹಾಗೂ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ವಿಶ್ವ ಮಧುಮೇಹ ದಿ ನಾಚರಣೆ ಅಂಗವಾಗಿ ಗುರುವಾರ ನಗರದ ಶ್ರೀ ಪ್ರಸನ್ನ ವೆಂಕಟೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಧುಮೇಹ ಪರೀಕ್ಷೆ, ರಕ್ತದೊತ್ತಡ ಹಾಗೂ ನೇತ್ರ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಕಾರ‌್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಸ್ಪತ್ರೆ ಮಧುಮೇಹ ತಜ್ಞ ಡಾ.ಸತೀಶ್,ಮಧು ಮೇಹ ಅಂದರೆ ಭಯ ಪಡಬೇಕಿಲ್ಲ. ನಾನು ಮಧುಮೇಹಿ ಎಂಬ ಕಹಿ ಭಾವನೆಯೊಂದಿಗೆ ಬದುಕುವುದನ್ನು ಬಿಟ್ಟು ಉತ್ತಮ ಆಹಾರ ಪ ದ್ಧತಿ,ಯೋಗ,ವ್ಯಾಯಾಮಯುಕ್ತ ಮತ್ತು ಒತ್ತಡ ಮುಕ್ತ ಜೀವನ ಶೈಲಿ ರೂಢಿಸಿಕೊಂಡರೆ ಮಧುಮೇಹವನ್ನು ನಿಯಂತ್ರಣದಲ್ಲಿ ಇಡ ಬ ಹುದಾಗಿದೆ ಎಂದರು.

ಕಾರ‌್ಯಕ್ರಮ ಉದ್ಘಾಟಿಸಿದ ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆ ನೇತ್ರ ತಜ್ಞ ಡಾ.ಮಂಜುನಾಥ್ ಮಾತನಾಡಿ, ಮಕ್ಕಳು ಮತ್ತು ಹದಿಹರೆಯ ದವರಲ್ಲೂ ಮಧುಮೇಹ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ ಎಂದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ಶ್ರೀನಿ ವಾಸ್‌ಮೂರ್ತಿ ಮಾತನಾಡಿದರು.

ಜಿಲ್ಲಾಸ್ಪತ್ರೆಯ ನೇತ್ರಾಧಿಕಾರಿ ರಾಮು,ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಡಿ.ಮಹೇಶ್, ಯೋ ಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ರವಿ ಕೆ.ಅಂಬೇಕರ್, ಸಮುದಾಯ ಆರೋಗ್ಯಾಧಿಕಾರಿಗಳಾದ ಶಭಾನ, ಜಯಲತಾ,ಯೋಗ ತರಬೇತುದಾರ ರಾದ ಎಂ.ಆರ್.ಮಂಜುನಾಥ್,ವಸಂತಲಕ್ಷ್ಮಿ,ಮಂಜುಳಾ ಇತರರು ಇದ್ದರು.

----