ಕಲಬುರಗಿ: ಸಾರ್ವಜನಿಕರಿಗೆ ತ್ವರಿತ ಮತ್ತು ಕಾಲಮಿತಿಯಲ್ಲಿ ವಿಲೇವಾರಿ ಮಾಡಲು "ಸಕಾಲ್" ಯೋಜನೆ ಜಾರಿಗೊಳಿಸಿದ್ದು, ಬಾಕಿ ಇಟ್ಟುಕೊಂಡರೆ ಮುಲಾಜಿಲ್ಲದೆ ಸಂಬಂಧಿಸಿದ ಅಧಿಕಾರಿ, -ಸಿಬ್ಬಂದಿ ಸಂಬಳದಲ್ಲಿ ಕಡಿತ ಮಾಡಿ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಖಡಕ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಕಾಲ್, ಐಪಿಜಿಆರ್ಎಸ್, ಸಿಸಿಎಂಎಸ್, ಸಿಎಂ ಜನಸ್ಪಂದನ, ಕಲಬುರಗಿ ಕನೆಕ್ಟ್ ರ‍್ಜಿ ವಿಲೇವಾರಿ ಸಂಬಂಧ ಪ್ರಗತಿ ಪರಿಶೀಲಿಸಿ ಮಾತನಾಡಿ, ಸರ‍್ವಜನಿಕರಿಗೆ ತ್ವರಿತ ಸೇವೆ ಒದಗಿಸಲು "ಇಂದು ನಾಳೆ ಇನ್ನಿಲ್ಲ, ಹೇಳಿದ ದಿನ ತಪ್ಪಲ್ಲ, ಘೋಷವಾಕ್ಯದೊಂದಿಗೆ ಸಕಾಲ್ ಅಧಿನಿಯಮ ತಂದಿದ್ದು, ಅಧಿಕಾರಿ -ಸಿಬ್ಬಂದಿ ಇದರ ಉದ್ದೇಶ ಅರಿತು ಕೆಲಸ ಮಾಡಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರ‍್ಕಾರದ ಮುಖ್ಯ ಕರ‍್ಯರ‍್ಶಿ ಡಾ.ಶಾಲಿನಿ ರಜನೀಶ್ ಅವರ ಕನಸಿನ ಯೋಜನೆ ಇದಾಗಿದೆ. ಬಾಕಿ ರ‍್ಜಿ ವಿಲೇವಾರಿ ಮಾಡಬೇಕು. ಮಹಾನಗರ ಪಾಲಿಕೆಯಲ್ಲಿ ೯೮ ಸೇರಿ ಇಂದಿನ ದಿನಕ್ಕೆ ವಿವಿಧ ಇಲಾಖೆಯಲ್ಲಿ ೩೨೮ ರ‍್ಜಿ ವಿಲೇವಾರಿಗೆ ಬಾಕಿ ಇದೆ. ಸಂಬಂಧಿಸಿದ ಅಧಿಕಾರಿಗಳು ಇಲಾಖಾವಾರು ಲಾಗಿನ್ನಲ್ಲಿ ರ‍್ಜಿ ವಿಲೇವಾರಿ ಮಾಡಿ, ಶೂನ್ಯಕ್ಕೆ ತನ್ನಿ ಎಂದರು.
ಸಕಾಲ್ದ ರ‍್ಜಿ ೩೦ ದಿನದಲ್ಲಿ ವಿಲೇವಾರಿ ಮಾಡಬೇಕು. ಅವಧಿ ರ‍್ಜಿ ವಿಲೇವಾರಿಗೆ ಸಾಕಾಗುತ್ತಿದೆ. ಕಾಲಮಿತಿಯಲ್ಲಿ ಸೇವೆ ನೀಡಲು ವಿಳಂಬವಾದಲ್ಲಿ ಸಂಬಂಧಿಸಿದ ಅಧಿಕಾರಿ, -ಸಿಬ್ಬಂದಿ ವೇತನ, ಬಡ್ತಿಗೂ ತಡೆ ಹಿಡಿಯಬೇಕು. ಕೆಲ ಇಲಾಖೆಯಲ್ಲಿ ತಾಂತ್ರಿಕ ಸಮಸ್ಯೆ ಕಾರಣ ರ‍್ಜಿ ವಿಲೇಗೆ ಸಮಸ್ಯೆ ಆಗುತ್ತಿದ್ದು, ಸಕಾಲ ಮಿಷನ್ ನರ‍್ದೇಶಕರಿಗೆ ಪತ್ರ ಬರೆಯಬೇಕು ಎಂದರು.
ಐಪಿಜಿಆರ್ಎಸ್ ಬಾಕಿ ರ‍್ಜಿ ಶುಕ್ರವಾರದೊಳಗೆ ವಿಲೇ ಆಗದಿದ್ದಲ್ಲಿ, ಸಂಬಂಧಿಸಿದವರಿಗೆ ನೋಟಿಸ್ ನೀಡಿ ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಸೂಚಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ‍್ಖಗೆ ಅವರ ಕನಸಿನ ಯೋಜನೆ "ಕಲಬುರಗಿ ಕನೆಕ್ಟ್" ನಲ್ಲಿ ೯೫ ರ‍್ಜಿ ವಿಲೇವಾರಿಗೆ ಬಾಕಿ ಇದ್ದು, ಕೂಡಲೆ ವಿಲೇವಾರಿಗೊಳಿಸಿ ಎಂದರು.
ಕರ‍್ಟ್ ಕೇಸ್ ಮಾನಿಟರಿಂಗ್ ಸಿಸ್ಟಮ್ ನಲ್ಲಿ ಜಿಲ್ಲೆಯಾದ್ಯಂತ ವಿವಿಧ ಇಲಾಖೆಗೆ ಸಂಬಂಧಿಸಿದ ೧,೨೦೩ ಪ್ರಕರಣಗಳು ನ್ಯಾಯಲಯದಲ್ಲಿ ಬಾಕಿ ಇದ್ದು, ತ್ವರಿತ ವಿಲೇವಾರಿ ಮಾಡಬೇಕು. ರಿಟ್ ಪಿಟೀಷನ್, ರಿಟ್ ಅಪೀಲ್ ಪ್ರಕರಣಗಳಲ್ಲಿ ಕರ‍್ಟ್ ನಲ್ಲಿ ಕೇಸ್ ದಾಖಲಾಗಿದ್ದ ಮಾಹಿತಿ ದೊರೆತ ತಕ್ಷಣ ಲಿಟಿಗೇಷನ್ ಕಂಡಕ್ಟಿಂಗ್ ಆಫೀಸರ್ ನೇಮಿಸಬೇಕು. ರ‍್ಕಾರಿ ವಕೀಲರನ್ನು ಭೇಟಿಯಾಗಿ ಇಲಾಖೆ ವಾದ ಮಂಡಿಸಬೇಕು. ಪ್ರಕರಣ ವಿಲೇವಾರಿ ನಂತರ ಕರ‍್ಟ್ ತರ‍್ಪಿನಂತೆ ಕ್ರಮ ವಹಿಸಲು ಇಲಾಖೆ ಮುಖ್ಯಸ್ಥರಿಗೆ ಮಾಹಿತಿ ನೀಡಬೇಕು ಎಂದರು.
ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಎಸ್.ಪಿ. ಅಡ್ಡೂರು ಶ್ರೀನಿವಾಸಲು ಇತರರಿದ್ದರು.