ತಿಗಡಿ ಗ್ರಾಮದಿಂದ ಗೋಕಾಕ ನಗರಕ್ಕೆ ಸಮರ್ಪಕವಾಗಿ ಬಸ್​ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮದ ವಿದ್ಯಾರ್ಥಿಗಳು ಗೋಕಾಕ ಕಂಟ್ರೋಲರ್​ ಕೆ.ವಿ. ಜಮಾದಾರಗೆ ಮನವಿ ಸಲ್ಲಿಸಿದರು. ಹನುಮಂತ ಅಂಬಿ, ಯಲ್ಲಪ್ಪ ಹುಲಿಕಟ್ಟಿ, ರುದ್ರಗೌಡ ಪಾಟೀಲ, ಸಿದ್ದರಾಯ ಬಿರಡಿ ಇತರರು ಇದ್ದರು. 
ಜಿಲ್ಲೆ

ಸಕಾಲಕ್ಕೆ ಬಸ್​ ಸಂಚಾರ ಕಲ್ಪಿಸಲಿ

ತಿಗಡಿ: ಗ್ರಾಮದಿಂದ ಗೋಕಾಕ ನಗರ ಸಂಪರ್ಕಿಸುವ ಬಸ್ಸುಗಳು ಸಮರ್ಪಕವಾಗಿ ಓಡಾಟ ನಡೆಸಲೆಂದು ಆಗ್ರಹಿಸಿ ಗ್ರಾಮದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮಂಗಳವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ತಿಗಡಿ ಕಲ್ಲು ಕಣಿವೆ ಹಾಗೂ ತಿಗಡಿ ಬಸ್​ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯ್ದು ಕುಳಿತರೆ ಯಾದವಾಡ ಕಡೆಯಿಂದ ಬರುವ ಎಲ್ಲ ಬಸ್ಸುಗಳು ಪ್ರಯಾಣಿಕರಿಂದ ತುಂಬಿ ಬರುತ್ತವೆ. ಹೀಗಾಗಿ ತಿಗಡಿ ಕಲ್ಲು ಕಣಿವೆ ಹಾಗೂ ತಿಗಡಿ ಬಸ್​ ನಿಲ್ದಾಣದಲ್ಲಿ ಯಾವುದೇ ಬಸ್​ ನಿಲ್ಲುವುದಿಲ್ಲ. ಇದರಿಂದ ಸುಣಧೋಳಿ, ತಳಕಟ್ನಾಳ, ಕಂಡರಟ್ಟಿ ತೋಟದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಗೋಕಾಕ ನಗರಕ್ಕೆ ಸಂಚರಿಸಲು ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಸಮಸ್ಯೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ತಿಳಿಸಿದಾಗ ತಣವೇ ಗೋಕಾಕ ಕೆಎಸ್​ಆರ್ಟಿಸಿ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಗೋಕಾಕ ಕಂಟ್ರೋಲರ್​ ಕೆ.ವಿ. ಜಮಾದಾರ ಹಾಗೂ ಇನ್​ಚಾರ್ಜ್​ ಶಂಕರ ಮಾದಿಗ ಅವರು ತಿಗಡಿ ಗ್ರಾಮಕ್ಕೆ ಆಗಮಿಸಿ ಸ್ಥಳಿಯರಿಂದ ಮನವಿ ಸ್ವೀಕರಿಸಿದರು. ಪ್ರತಿದಿನ ಬೆಳಗ್ಗೆ 8 ಗಂಟೆಗೆ ಮೂರ್ನಾಲ್ಕು ದಿನಗಳಲ್ಲಿ ಬಸ್​ ಓಡಿಸುವುದಾಗಿ ಭರವಸೆ ನೀಡಿದರು.
ನಾಲ್ಕು ದಿನಗಳಲ್ಲಿ ಬಸ್​ ಸಂಚಾರ ಆರಂಭಿಸದಿದ್ದರೆ ರಸ್ತೆ ಸಂಚಾರ ತಡೆದು ಪ್ರತಿಭಟನೆ ಮಾಡುತ್ತೇವೆ ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಎಚ್ಚರಿಸಿದರು. ಮುಖಂಡರಾದ ಹನುಮಂತ ಅಂಬಿ, ಯಲ್ಲಪ್ಪ ಹುಲಿಕಟ್ಟಿ, ರುದ್ರಗೌಡ ಪಾಟೀಲ, ಸಿದ್ದರಾಯ ಬಿರಡಿ, ರಫೀಕ್​ ಲಾಡಖಾನ್​, ಅಶೋಕ ಪೂಜಾರಿ ಇತರರಿದ್ದರು.