ಜಿಲ್ಲೆ

ಸಕಾರಾತ್ಮಕ ಸ್ವೀಕಾರದಿಂದ ಸಿದ್ಧಿ ಪ್ರಾಪ್ತಿ

ಕಲಬುರಗಿ: ಜಗತ್ತಿನಲ್ಲಿ ಯಾವುದೇ ಘಟನೆಗಳು ಸಂಭವಿಸಲಿ. ನಾವು ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದನ್ನು ರೂಢಿಸಿಕೊಂಡರೆ ಮಾನಸಿಕ, ಶಾರೀರಿಕ ಸಿದ್ಧಿಯನ್ನು ಸಾಧಿಸಬಹುದು ಎಂದು ದೆಹಲಿಯ ರಾಜಯೋಗಿ ಡಾ.ಮೋಹಿತ್ ಗುಪ್ತಾ ಹೇಳಿದರು.

ನಗರದ ಹೊರವಲಯದ ಅಮೃತ ಸರೋವರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ಸಂಜೆ ವೈದ್ಯರಿಗಾಗಿ ಏರ್ಪಡಿಸಿದ್ದ ಉಪನ್ಯಾಸದಲ್ಲಿ ಮಾತನಾಡಿ, ಯೋಗ ಕೇವಲ ಶಾರೀರಿಕ ಪ್ರಕ್ರಿಯೆ ಅಲ್ಲ, ಮನುಷ್ಯನಲ್ಲಿನ ಚೈತನ್ಯ ಶಕ್ತಿ, ದೃಢ ಸಂಕಲ್ಪವನ್ನು ಬಲಗೊಳಿಸುವ ಸಾಧನ ಎಂದರು.

ಅಮೆರಿಕದ ರಾಜಯೋಗಿನಿ ಜಯಂತಿ ದಿದಿ, ರಾಜಯೋಗಿನಿ ವಿಜಯಾದೀದಿ, ರಾಜಯೋಗಿ ಡಾ.ಪ್ರೇಮ ಮಾತನಾಡಿದರು. ಕಲಬುರಗಿ, ಯಾದಗಿರಿ, ಮಹಾರಾಷ್ಟ್ರದ ಲಾತೂರು ಸೇರಿ ವಿವಿಧೆಡೆಯ ಐದನೂರಕ್ಕೂ ಹೆಚ್ಚು ವೈದ್ಯರು ಪಾಲ್ಗೊಂಡಿದ್ದರು.

ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ ನಿಷ್ಠಿ, ಡಾ.ಎ.ಬಿ.ಮಲಕರೆಡ್ಡಿ, ಡಾ.ಶಕುಂತಲಾ ಬನಾಳೆ, ಡಾ.ಭಾಗ್ಯಶ್ರೀ ಶರಣಪ್ರಕಾಶ ಪಾಟೀಲ್, ಡಾ.ಅಲ್ಲಮಪ್ರಭು ಪಾಟೀಲ್, ಡಾ.ಗಣಜಲಖೇಡ, ಡಾ.ಹರವಾಳ, ಡಾ.ಪ್ರಶಾಂತ ಪಾಟೀಲ್, ಡಾ.ಸಿದ್ದೇಶ, ಡಾ.ಆನಂದನಾರಾಯಣ, ಡಾ.ವೈಶಾಲಿ ಮಾಲೂ, ಮೌಂಟ್ ಅಬುವಿನ ಡಾ.ರಮ್ಯಾ, ಬಿ ಕೆ ಶಿವಲೀಲಾ ಇತರರಿದ್ದರು. ಚಿರಾಯು ಆಸ್ಪತ್ರೆ ಮುಖ್ಯಸ್ಥ ಡಾ.ಮಂಜುನಾಥ ದೋಶೆಟ್ಟಿ ನಿರೂಪಣೆ ಮಾಡಿದರು.