ಜಿಲ್ಲೆ

ಸಕಲೇಶಪುರದ ಧನ್ಯಾ ಯುಪಿಎಸ್‌ಸಿ ಪರೀಕ್ಷೆಯಲ್ಲಿ 982ನೇ ರ್ಯಾಂಕ್

ಹಾಸನ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2024ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಕಲೇಶಪುರದ ಮಲ್ಲಿಕಾರ್ಜುನ ನಗರ ನಿವಾಸಿ ಕೆ.ಎಸ್‌. ಧನ್ಯಾ 982ನೇ ರ್ಯಾಂಕ್ ಪಡೆದಿದ್ದಾರೆ.

ಸಂಬಾರ ಮಂಡಳಿಯಲ್ಲಿ ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಟಿ. ಸುಬ್ರಹ್ಮಣ್ಯ ಹಾಗೂ ಸಕಲೇಶಪುರದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಹಿರಿಯ ಶಿರಸ್ತೆದಾರರಾಗಿರುವ ಪಿ. ವಿಜಯಕುಮಾರಿ ಇವರ ಪುತ್ರಿ. ಯುಪಿಎಸ್‌ಸಿ ಪರೀಕ್ಷೆಯನ್ನು ಮೂರನೇ ಬಾರಿ ಬರೆದು, ಮೊದಲ ಎರಡು ಪರೀಕ್ಷೆಯಲ್ಲಿ ಪ್ರಿಲಿಮ್ಸ್ ಸಹ ಆಗಿರಲಿಲ್ಲ. 3ನೇ ಪರೀಕ್ಷೆಯಲ್ಲಿ ಪ್ರಿಲಿಮ್ಸ್‌, ಮೈನ್ಸ್‌ ಹಾಗೂ ಸಂದರ್ಶನದಲ್ಲಿ ಉತೀರ್ಣರಾಗಿದ್ದಾರೆ.

ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡಿ, ಇ ಅಂಡ್‌ ವೈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು, ಲೈಬ್ರರಿಯಲ್ಲಿಯಲ್ಲಿ ಪುಸ್ತಕಗಳನ್ನು ಅಧ್ಯಯನ ಮಾಡಿಯೇ ಪರೀಕ್ಷೆ ತೆಗೆದುಕೊಂಡಿದ್ದಾಗಿ ಇವರ ಪೋಷಕರು್ ಹೆಮ್ಮೆಯಿಂದ ಹೇಳುತ್ತಾರೆ.

ಎಲ್‌ಕೆಜಿಯಿಂದ 5ನೇ ತರಗತಿ ವರೆಗೆ ಸಕಲೇಶಪುರದ ರೋಟರಿ ಆಂಗ್ಲ ಶಾಲೆಯಲ್ಲಿ ವ್ಯಾಸಂಗ ಮಾಡಿ, 6ರಿಂದ 12ನೇ ತರಗತಿ ವರೆಗೆ ನವೋದಯ ಶಾಲೆ, ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.