ಸಕಲೇಶಪುರ : ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಸೋಮವಾರ ಪಟ್ಟಣದ ಚಂಪಕನಗರ ಬಡಾವಣೆಯ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದಲ್ಲಿ ಹಳೇ ಬಡಾವಣೆ ಎಂದು ಗುರುತಿಸಿಕೊಂಡಿದ್ದ ಚಂಪಕನಗರ ಬಡಾವಣೆ ಕೆಲವು ರಸ್ತೆಗಳು ಕಾಂಕ್ರಿಟೀಕರಣಗೊಳ್ಳದ ಕಾರಣ ಹಿಂದುಳಿದ ಬಡಾವಣೆ ಎಂಬ ಹಣೆಪಟ್ಟಿ ಅಂಟಿಸಿಕೊಂಡಿತ್ತು. ಪುರಸಭೆಗೆ ಅತಿಹೆಚ್ಚು ಆದಾಯ ತಂದುಕೊಡುವ ಈ ಬಡಾವಣೆಯ ಬಾಕಿ ಉಳಿದಿದ್ದ ರಸ್ತೆಗಳನ್ನು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಗಳನ್ನಾಗಿ ಪರಿವರ್ತಿಸುವ ಮೂಲಕ ಹಿಂದುಳಿದ ಬಡಾವಣೆ ಎಂಬ ಪಟ್ಟಿಯನ್ನು ಕಿತ್ತುಹಾಕುವ ಪ್ರಯತ್ನ ನಡೆಸಲಾಗಿದೆ. ಬಾಕಿ ಉಳಿದಿರುವ ಚರಂಡಿಗಳಿಗೆ ಸ್ಲಾೃಬ್ ಹಾಕುವ ಕಾರ್ಯವನ್ನು ಕಾಲಾನುಕಾಲಕ್ಕೆ ನಡೆಸಲಾಗುವುದು ಎಂದರು. ಸ್ಚಚ್ಛತೆ ಕಾರ್ಯ ನಡೆಸುವುದು ಪುರಸಭೆಗೆ ಮಾತ್ರ ಸಂಬಂದಿಸಿದ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕರ ಕೆಲಸ. ಹಸಿಕಸ ಒಣಕಸ ವಿಂಗಡಿಸಿ ಹಾಗೂ ಕಸವನ್ನು ಸಾರ್ವಜನಿಕ ಪ್ರದೇಶದಲ್ಲಿ ಹಾಕಬೇಡಿ ಎಂಬ ಪುರಸಭೆಯ ಮನವಿಗೆ ನಾಗರಿಕರು ಸ್ಪಂದಿಸದಿರುವುದು ಪಟ್ಟಣದ ಸ್ವಚ್ಛತೆಗೆ ಸಮಸ್ಯೆಯಾಗಿದೆ ಎಂದರು.
ಸ್ಥಳೀಯ ಮುಖಂಡರಾದ ಮೋಹನ್, ರವಿಕುಮಾರ್, ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.