ಪುನರ್ವ 
ಜಿಲ್ಲೆ

ಸಕಲೇಶಪುರ ತಾಲೂಕಿಗೆ ಪುನರ್ವ ಪ್ರಥಮ

ಸಕಲೇಶಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 4 ಹೆಚ್ಚುವರಿ ಅಂಕ ಗಳಿಸುವ ಮೂಲಕ ಪಟ್ಟಣದ ರೋಟರಿ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿನಿ ಪುನರ್ವ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. 617 ಅಂಕ ಗಳಿಸಿ ತಾಲೂಕಿಗೆ ಎರಡನೇ ಸ್ಥಾನ ಪಡೆದಿದ್ದ ಈಕೆ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ ಮರು ಮೌಲ್ಯಮಾಪನಕ್ಕೆ ಹಾಕಿದ್ದಳು. ಎರಡು ವಿಷಯಗಳಲ್ಲಿ ತಲಾ ಎರಡು ಅಂಕಗಳು ಹೆಚ್ಚು ಲಭಿಸಿದ್ದು, ಒಟ್ಟು 621 ಅಂಕ ಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.