ಜಿಲ್ಲೆ

ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವರು ವಿಶ್ವಾರಾಧ್ಯರು


ಯಾದಗಿರಿ: ಕಾಶಿ ಘನಪಂಡಿತರಾಗಿದ್ದ ವಿಶ್ವಾರಾಧ್ಯರು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದವರಾಗಿದ್ದಾರೆ ಎಂದು ಅಬ್ಬೆತುಮಕೂರಿನ ಪೀಠಾಪತಿ ಡಾ.ಗಂಗಾಧರ ಮಹಾಸ್ವಾಮಿಗಳು ನುಡಿದರು.

ಗುರುವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಶ್ರಾವಣ ಮಾಸದ ನಿಮಿತ್ತ ತಿಂಗಳ ಪರ್ಯತ ಆಯೋಜಿಸಿದ್ದ ಧಾಮರ್ಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿಶ್ವಾರಾಧ್ಯರು ಒಮ್ಮೆ ಊಟಕ್ಕೆ ಕುಳಿತಾಗ ಅವರ ತಟ್ಟೆಯ ಮುಂದೆ ಒಂದು ಜಿಂಕೆ, ನಾಯಿಗಳು ಬಂದು

ಪ್ರಸಾದ ತಿನ್ನತೊಡಗಿದವು. ಇದನ್ನು ತಡೆಯಲು ಮುಂದಾದ ಭಕ್ತರನ್ನು ತಡೆದು, ಪ್ರಾಣಿಗಳ ಬಗ್ಗೆ ನಾವು ದಯೆ ತೋರಬೇಕು. ಅವು ಸೇವಿಸಿದ ಪ್ರಸಾದ ಶಿವನಿಗೆ ಅರ್ಪಣೆಯಾಗುತ್ತದೆ ಎಂದು ಹಿತೋಪದೇಶ ಮಾಡಿದ್ದರು ಎಂದು ಘಟನೆಯೊಂದನ್ನು ಮೆಲುಕು ಹಾಕಿದರು.

ಬಸವರಾಜ ಶಾಸ್ತ್ರಿಗಳು ಸಂಗೀತ ಗಾಯನದ ಮೂಲಕ ವಿಶ್ವಾರಾಧ್ಯರ ಲೀಲೆಗಳು ಹಾಗೂ ಪವಾಡಗಳನ್ನು ಮನಮುಟ್ಟುವಂತೆ ಗಾಯನ ರೂಪದಲ್ಲಿ ಪ್ರಸ್ತುತ ಪಡಿಸಿದರು. ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಕೌಲಗಿ ಪ್ರಾಸ್ತಾವಿಕ ಮಾತನಾಡಿದರು. ಮಹಾಸಭಾ ಜಿಲ್ಲಾದ್ಯಕ್ಷ ಸೋಮಶೇಖರ ಮಣ್ಣೂರು, ಮಾಜಿ ಎಂಎಲ್ಸಿ ಚನ್ನಾರಡ್ಡಿ ಪಾಟೀಲ್ ತುನ್ನೂರು, ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಅಯ್ಯಣ್ಣ ಹುಂಡೇಕಾರ್ ಇದ್ದರು.

ಬಸವರಾಜ ಮೋಟ್ನಳ್ಳಿ ಸ್ವಾಗತಿಸಿದರು. ಮಹೇಶ ಹಿರೇಮಠ ನಿರುಪಿಸಿದರು. ಡಾ.ಸಿದ್ದರಾಜರೆಡ್ಡಿ ವಂದಿಸಿದರು.